Adi Parva: Chapter 177

ಆದಿ ಪರ್ವ: ಸ್ವಯಂವರ ಪರ್ವ

೧೭೭

ಧೃಷ್ಟದ್ಯುಮ್ನನು ಸ್ವಯಂವರಕ್ಕೆ ಆಗಮಿಸಿರುವ ರಾಜರನ್ನು ಪರಿಚಯಿಸುವುದು (೧-೨೨).

01177001 ಧೃಷ್ಟದ್ಯುಮ್ನ ಉವಾಚ

01177001a ದುರ್ಯೋಧನೋ ದುರ್ವಿಷಹೋ ದುರ್ಮುಖೋ ದುಷ್ಪ್ರಧರ್ಷಣಃ|

01177001c ವಿವಿಂಶತಿರ್ವಿಕರ್ಣಶ್ಚ ಸಹೋ ದುಃಶಾಸನಃ ಸಮಃ||

01177002a ಯುಯುತ್ಸುರ್ವಾತವೇಗಶ್ಚ ಭೀಮವೇಗಧರಸ್ತಥಾ|

01177002c ಉಗ್ರಾಯುಧೋ ಬಲಾಕೀ ಚ ಕನಕಾಯುರ್ವಿರೋಚನಃ||

01177003a ಸುಕುಂಡಲಶ್ಚಿತ್ರಸೇನಃ ಸುವರ್ಚಾಃ ಕನಕಧ್ವಜಃ|

01177003c ನಂದಕೋ ಬಾಹುಶಾಲೀ ಚ ಕುಂಡಜೋ ವಿಕಟಸ್ತಥಾ||

01177004a ಏತೇ ಚಾನ್ಯೇ ಚ ಬಹವೋ ಧಾರ್ತರಾಷ್ಟ್ರಾ ಮಹಾಬಲಾಃ|

01177004c ಕರ್ಣೇನ ಸಹಿತಾ ವೀರಾಸ್ತ್ವದರ್ಥಂ ಸಮುಪಾಗತಾಃ|

01177004e ಶತಸಂಖ್ಯಾ ಮಹಾತ್ಮಾನಃ ಪ್ರಥಿತಾಃ ಕ್ಷತ್ರಿಯರ್ಷಭಾಃ||

ಧೃಷ್ಟದ್ಯುಮ್ನನು ಹೇಳಿದನು: “ದುರ್ಯೋಧನ, ದುರ್ವಿಷಹ, ದುರ್ಮುಖ, ದುಷ್ಪ್ರಧರ್ಷಣ, ವಿವಿಂಶತಿ, ವಿಕರ್ಣ, ಸಹ, ದುಃಶಾಸನ, ಸಮ, ಯುಯುತ್ಸು, ವಾತವೇಗ, ಭೀಮವೇಗಧರ, ಉಗ್ರಾಯುಧ, ಬಲಾಕೀ, ಕನಕಾಯು, ವಿರೋಚನ, ಸುಕುಂಡಲ, ಚಿತ್ರಸೇನ, ಸುವರ್ಚ, ಕನಕಧ್ವಜ, ನಂದಕ, ಬಾಹುಶಾಲಿ, ಕುಂಡಜ, ವಿಕಟ ಇವರು ಮತ್ತು ಧೃತರಾಷ್ಟ್ರನ ಇನ್ನೂ ಅನೇಕ ಮಹಾಬಲ ವೀರ ಮಕ್ಕಳು ಕರ್ಣನ ಜೊತೆಗೂಡಿ ನಿನಗೋಸ್ಕರ ಆಗಮಿಸಿದ್ದಾರೆ! ಇಂಥಹ ನೂರಾರು ಮಹಾತ್ಮ ಪ್ರಸಿದ್ಧ ಕ್ಷತ್ರಿಯರ್ಷಭರು ಆಗಮಿಸಿದ್ದಾರೆ.

01177005a ಶಕುನಿಶ್ಚ ಬಲಶ್ಚೈವ ವೃಷಕೋಽಥ ಬೃಹದ್ಬಲಃ|

01177005c ಏತೇ ಗಾಂಧಾರರಾಜಸ್ಯ ಸುತಾಃ ಸರ್ವೇ ಸಮಾಗತಾಃ||

ಶಕುನಿ, ಬಲ, ವೃಷಕ, ಬೃಹದ್ಬಲ ಗಾಂಧಾರರಾಜನ ಎಲ್ಲ ಸುತರೂ ಇಲ್ಲಿ ಸಮಾವೇಷಗೊಂಡಿದ್ದಾರೆ.

01177006a ಅಶ್ವತ್ಥಾಮಾ ಚ ಭೋಜಶ್ಚ ಸರ್ವಶಸ್ತ್ರಭೃತಾಂ ವರೌ|

01177006c ಸಮವೇತೌ ಮಹಾತ್ಮಾನೌ ತ್ವದರ್ಥೇ ಸಮಲಂಕೃತೌ||

ಸರ್ವ ಶಸ್ತ್ರಭೃತರಲ್ಲಿ ಶ್ರೇಷ್ಠ, ಮಹಾತ್ಮ ಅಶ್ವತ್ಥಾಮ ಮತ್ತು ಭೋಜ ಇಬ್ಬರೂ ನಿನಗಾಗಿ ಸಮಲಂಕೃತರಾಗಿ ಬಂದಿದ್ದಾರೆ.

01177007a ಬೃಹಂತೋ ಮಣಿಮಾಂಶ್ಚೈವ ದಂಡಧಾರಶ್ಚ ವೀರ್ಯವಾನ್|

01177007c ಸಹದೇವೋ ಜಯತ್ಸೇನೋ ಮೇಘಸಂಧಿಶ್ಚ ಮಾಗಧಃ||

01177008a ವಿರಾಟಃ ಸಹ ಪುತ್ರಾಭ್ಯಾಂ ಶಂಖೇನೈವೋತ್ತರೇಣ ಚ|

01177008c ವಾರ್ಧಕ್ಷೇಮಿಃ ಸುವರ್ಚಾಶ್ಚ ಸೇನಾಬಿಂದುಶ್ಚ ಪಾರ್ಥಿವಃ||

01177009a ಅಭಿಭೂಃ ಸಹ ಪುತ್ರೇಣ ಸುದಾಮ್ನಾ ಚ ಸುವರ್ಚಸಾ|

01177009c ಸುಮಿತ್ರಃ ಸುಕುಮಾರಶ್ಚ ವೃಕಃ ಸತ್ಯಧೃತಿಸ್ತಥಾ||

01177010a ಸೂರ್ಯಧ್ವಜೋ ರೋಚಮಾನೋ ನೀಲಶ್ಚಿತ್ರಾಯುಧಸ್ತಥಾ|

01177010c ಅಂಶುಮಾಂಶ್ಚೇಕಿತಾನಶ್ಚ ಶ್ರೇಣಿಮಾಂಶ್ಚ ಮಹಾಬಲಃ||

01177011a ಸಮುದ್ರಸೇನಪುತ್ರಶ್ಚ ಚಂದ್ರಸೇನಃ ಪ್ರತಾಪವಾನ್|

01177011c ಜಲಸಂಧಃ ಪಿತಾಪುತ್ರೌ ಸುದಂಡೋ ದಂಡ ಏವ ಚ||

01177012a ಪೌಂಡ್ರಕೋ ವಾಸುದೇವಶ್ಚ ಭಗದತ್ತಶ್ಚ ವೀರ್ಯವಾನ್|

01177012c ಕಲಿಂಗಸ್ತಾಮ್ರಲಿಪ್ತಶ್ಚ ಪತ್ತನಾಧಿಪತಿಸ್ತಥಾ||

01177013a ಮದ್ರರಾಜಸ್ತಥಾ ಶಲ್ಯಃ ಸಹಪುತ್ರೋ ಮಹಾರಥಃ|

01177013c ರುಕ್ಮಾಂಗದೇನ ವೀರೇಣ ತಥಾ ರುಕ್ಮರಥೇನ ಚ||

ಬೃಹಂತ, ಮಣಿಮಾ, ವೀರ್ಯವಂತ ದಂಡಧಾರ, ಸಹದೇವ, ಮಾಗಧ ಮೇಘಸಂಧಿ, ತನ್ನ ಇಬ್ಬರು-ಶಂಖ ಮತ್ತು ಉತ್ತರ-ಪುತ್ರರನ್ನೊಡಗೂಡಿದ ವಿರಾಟ, ವಾರ್ಧಕ್ಷೇಮಿ (ವೃದ್ಧಕ್ಷೇಮನ ಮಗ ಜಯದ್ರಥ), ಸುವರ್ಚಾ, ರಾಜ ಸೇನಾಬಿಂದು, ತನ್ನ ಸುವರ್ಚಸ ಪುತ್ರನನ್ನೊಡಗೂಡಿದ ಅಭಿಭೂ, ಸುಮಿತ್ರ, ಸುಕುಮಾರ, ವೃಕ, ಸತ್ಯಧೃತಿ, ಸೂರ್ಯಧ್ವಜ, ರೋಚಮಾನ, ನೀಲ, ಚಿತ್ರಾಯುಧ, ಅಂಶುಮಾನ್, ಚೇಕಿತಾನ, ಮಹಾಬಲ ಶ್ರೇಣಿಮಾನ್, ಸಮುದ್ರಸೇನನ ಪ್ರತಾಪಿ ಪುತ್ರ ಚಂದ್ರಸೇನ, ಜಲಸಂಧ, ಪಿತಾಪುತ್ರ ಸುದಂಡ ಮತ್ತು ದಂಡ, ಪೌಂಡ್ರಕ, ವಾಸುದೇವ, ವೀರ್ಯವಾನ್ ಭಗದತ್ತ, ಕಲಿಂಗ, ತಾಮ್ರಲಿಪ್ತ, ಪತ್ತನದ ಅಧಿಪತಿ, ಪುತ್ರರಿಂದೊಡಗೂಡಿ ಮಹಾರಥಿ ಮದ್ರರಾಜ, ಹಾಗೂ ವೀರ ರುಕ್ಮಾಂಗದ-ರುಕ್ಮರಥ ಇವರೆಲ್ಲರೂ ಇಲ್ಲಿ ಸೇರಿದ್ದಾರೆ.

01177014a ಕೌರವ್ಯಃ ಸೋಮದತ್ತಶ್ಚ ಪುತ್ರಾಶ್ಚಾಸ್ಯ ಮಹಾರಥಾಃ|

01177014c ಸಮವೇತಾಸ್ತ್ರಯಃ ಶೂರಾ ಭೂರಿರ್ಭೂರಿಶ್ರವಾಃ ಶಲಃ||

01177015a ಸುದಕ್ಷಿಣಶ್ಚ ಕಾಂಬೋಜೋ ದೃಢಧನ್ವಾ ಚ ಕೌರವಃ|

01177015c ಬೃಹದ್ಬಲಃ ಸುಷೇಣಶ್ಚ ಶಿಬಿರೌಶೀನರಸ್ತಥಾ||

ಅಲ್ಲಿ ಕೌರವ್ಯ ಸೋಮದತ್ತ ಮತ್ತು ಅವನ ಮಹಾರಥಿ ಪುತ್ರರು, ಶೂರತ್ರಯ ಭೂರಿ, ಭೂರಿಶ್ರವ ಮತ್ತು ಶಲ, ಸುದಕ್ಷಿಣ, ಕಾಂಬೋಜ, ಕೌರವ ದೃಢಧನ್ವ, ಬೃಹದ್ಬಲ, ಸುಷೇಣ, ಮತ್ತು ಶಿಬಿ ಔಶೀನರ ಮುಂತಾದವರು ಆಸೀನರಾಗಿದ್ದಾರೆ.

01177016a ಸಂಕರ್ಷಣೋ ವಾಸುದೇವೋ ರೌಕ್ಮಿಣೇಯಶ್ಚ ವೀರ್ಯವಾನ್|

01177016c ಸಾಂಬಶ್ಚ ಚಾರುದೇಷ್ಣಶ್ಚ ಸಾರಣೋಽಥ ಗದಸ್ತಥಾ||

01177017a ಅಕ್ರೂರಃ ಸಾತ್ಯಕಿಶ್ಚೈವ ಉದ್ಧವಶ್ಚ ಮಹಾಬಲಃ|

01177017c ಕೃತವರ್ಮಾ ಚ ಹಾರ್ದಿಕ್ಯಃ ಪೃಥುರ್ವಿಪೃಥುರೇವ ಚ||

01177018a ವಿಡೂರಥಶ್ಚ ಕಂಕಶ್ಚ ಸಮೀಕಃ ಸಾರಮೇಜಯಃ|

01177018c ವೀರೋ ವಾತಪತಿಶ್ಚೈವ ಝಿಲ್ಲೀ ಪಿಂಡಾರಕಸ್ತಥಾ|

01177018e ಉಶೀನರಶ್ಚ ವಿಕ್ರಾಂತೋ ವೃಷ್ಣಯಸ್ತೇ ಪ್ರಕೀರ್ತಿತಾಃ||

ಸಂಕರ್ಷಣ, ವಾಸುದೇವ, ವೀರ್ಯವಾನ್ ರೌಕ್ಮಿಣೇಯ, ಸಾಂಬ, ಚಾರುದೇಷ್ಣ, ಸಾರಣ, ಗದ, ಅಕ್ರೂರ, ಸಾತ್ಯಕಿ, ಮಹಾಬಲ ಉದ್ಧವ, ಕೃತವರ್ಮ ಹಾರ್ದಿಕ್ಯ, ಪೃಥು ಮತ್ತು ವಿಪೃಥು, ವಿಢೂರಥ, ಕಂಕ, ಸಮೀಕ, ಸಾರಮೇಜಯ, ವೀರ ವಾತಪತಿ, ಝಿಲ್ಲಿ, ಪಿಂಡಾರಕ, ವಿಕ್ರಾಂತ, ಉಶೀನರ, ಈ ಎಲ್ಲ ಪ್ರಖ್ಯಾತ ವೃಷ್ಣಿಗಳೂ ಆಗಮಿಸಿದ್ದಾರೆ.

01177019a ಭಗೀರಥೋ ಬೃಹತ್ಕ್ಷತ್ರಃ ಸೈಂಧವಶ್ಚ ಜಯದ್ರಥಃ|

01177019c ಬೃಹದ್ರಥೋ ಬಾಹ್ಲಿಕಶ್ಚ ಶ್ರುತಾಯುಶ್ಚ ಮಹಾರಥಃ||

01177020a ಉಲೂಕಃ ಕೈತವೋ ರಾಜಾ ಚಿತ್ರಾಂಗದಶುಭಾಂಗದೌ|

01177020c ವತ್ಸರಾಜಶ್ಚ ಧೃತಿಮಾನ್ ಕೋಸಲಾಧಿಪತಿಸ್ತಥಾ||

ಭಗೀರಥ, ಬೃಹತ್ಕ್ಷತ್ರ, ಸೈಂಧವ ಜಯದ್ರಥ, ಬೃಹದ್ರಥ, ಬಾಹ್ಲೀಕ, ಮಹಾರಥಿ ಶೃತಾಯು, ಉಲೂಕ, ರಾಜ ಕೈತವ, ಚಿತ್ರಾಂಗದ, ಶುಭಾಂಗದ, ಧೃತಿವಂತ ವತ್ಸ ರಾಜ, ಮತ್ತು ಕೋಸಲಾಧಿಪತಿ ಇವರೆಲ್ಲರೂ ಇಲ್ಲಿ ನೆರೆದಿದ್ದಾರೆ.

01177021a ಏತೇ ಚಾನ್ಯೇ ಚ ಬಹವೋ ನಾನಾಜನಪದೇಶ್ವರಾಃ|

01177021c ತ್ವದರ್ಥಮಾಗತಾ ಭದ್ರೇ ಕ್ಷತ್ರಿಯಾಃ ಪ್ರಥಿತಾ ಭುವಿ||

ಭದ್ರೇ! ಇವರೆಲ್ಲರೂ ಮತ್ತು ಇನ್ನೂ ಅನೇಕ ನಾನಾ ಜನಪದೇಶ್ವರರು - ಭೂಮಿಯಲ್ಲಿ ಪ್ರಖ್ಯಾತ ಎಲ್ಲ ಕ್ಷತ್ರಿಯರೂ ನಿನ್ನನ್ನು ಗೆಲ್ಲಲು ಆಗಮಿಸಿದ್ದಾರೆ.

01177022a ಏತೇ ವೇತ್ಸ್ಯಂತಿ ವಿಕ್ರಾಂತಾಸ್ತ್ವದರ್ಥಂ ಲಕ್ಷ್ಯಮುತ್ತಮಂ|

01177022c ವಿಧ್ಯೇತ ಯ ಇಮಂ ಲಕ್ಷ್ಯಂ ವರಯೇಥಾಃ ಶುಭೇಽದ್ಯ ತಂ||

ಶುಭೇ! ನಿನ್ನನ್ನು ಗೆಲ್ಲುವ ಉದ್ದೇಶದಿಂದ ಈ ವೀರರು ಆ ಉತ್ತಮ ಲಕ್ಷ್ಯಕ್ಕೆ ಗುರಿಯಿಟ್ಟು ಬಾಣಬಿಡುವರು. ಮತ್ತು ನೀನು ಆ ಲಕ್ಷ್ಯಕ್ಕೆ ಹೊಡೆಯುವನನ್ನು ವರನನ್ನಾಗಿ ಆರಿಸುವೆ.””

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸ್ವಯಂವರಪರ್ವಣಿ ರಾಜನಾಮಕೀರ್ತನೇ ಸಪ್ತಸಪ್ತತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸ್ವಯಂವರಪರ್ವದಲ್ಲಿ ರಾಜನಾಮಕೀರ್ತನದಲ್ಲಿ ನೂರಾಎಪ್ಪತ್ತೇಳನೆಯ ಅಧ್ಯಾಯವು.

Related image

Comments are closed.