Adi Parva: Chapter 143

ಆದಿ ಪರ್ವ: ಹಿಡಿಂಬವಧ ಪರ್ವ

೧೪೩

ಹಿಡಿಂಬೆಗೆ ಭೀಮನನ್ನು ವರಿಸಲು ಯುಧಿಷ್ಠಿರನು ಅನುಮತಿಯನ್ನು ನೀಡಿದ್ದುದು (೧-೧೮). ಭೀಮ-ಹಿಡಿಂಬೆಯರಿಗೆ ಘತೋತ್ಕಚನ ಜನನ (೧೯-೩೮).

01143001 ಭೀಮ ಉವಾಚ|

01143001a ಸ್ಮರಂತಿ ವೈರಂ ರಕ್ಷಾಂಸಿ ಮಾಯಾಮಾಶ್ರಿತ್ಯ ಮೋಹಿನೀಂ|

01143001c ಹಿಡಿಂಬೇ ವ್ರಜ ಪಂಥಾನಂ ತ್ವಂ ವೈ ಭ್ರಾತೃನಿಷೇವಿತಂ||

ಭೀಮನು ಹೇಳಿದನು: “ರಾಕ್ಷಸರು ವೈರತ್ವವನ್ನು ನೆನಪಿನಲ್ಲಿಟ್ಟುಕೊಂಡು ಮೋಹನೀಯ ಮಾಯೆಗಳನ್ನು ಬಳಸುತ್ತಾರೆ. ಹಿಡಿಂಬೇ! ನಿನ್ನ ಅಣ್ಣನು ಬೆಳಗಿದ ದಾರಿಯಲ್ಲಿ ನೀನೂ ಹೋಗು.”

01143002 ಯುಧಿಷ್ಠಿರ ಉವಾಚ|

01143002a ಕ್ರುದ್ಧೋಽಪಿ ಪುರುಷವ್ಯಾಘ್ರ ಭೀಮ ಮಾ ಸ್ಮ ಸ್ತ್ರಿಯಂ ವಧೀಃ|

01143002c ಶರೀರಗುಪ್ತ್ಯಾಭ್ಯಧಿಕಂ ಧರ್ಮಂ ಗೋಪಯ ಪಾಂಡವ||

ಯುಧಿಷ್ಠಿರನು ಹೇಳಿದನು: “ಪುರುಷವ್ಯಾಘ್ರ ಭೀಮ! ಕೋಪದಲ್ಲಿಯೂ ಕೂಡ ಒಂದು ಸ್ತ್ರೀಯನ್ನು ಕೊಲ್ಲಬೇಡ. ಪಾಂಡವ! ಶರೀರಕ್ಕಿಂತಲೂ ಅಧಿಕ ಧರ್ಮವನ್ನು ಕಾಪಾಡು.

01143003a ವಧಾಭಿಪ್ರಾಯಮಾಯಾಂತಮವಧೀಸ್ತ್ವಂ ಮಹಾಬಲಂ|

01143003c ರಕ್ಷಸಸ್ತಸ್ಯ ಭಗಿನೀ ಕಿಂ ನಃ ಕ್ರುದ್ಧಾ ಕರಿಷ್ಯತಿ||

ನಮ್ಮನ್ನು ಕೊಲ್ಲುವ ಉದ್ದೇಶವನ್ನಿಟ್ಟುಕೊಂಡು ಬಂದಿದ್ದ ಮಹಾಬಲಶಾಲಿ ರಾಕ್ಷಸನನ್ನು ನೀನು ಕೊಂದುಹಾಕಿದ್ದೀಯೆ. ಆದರೆ ಅವನ ತಂಗಿಯಾದ ಇವಳು ಕೋಪಗೊಂಡಿದ್ದರೂ ನಮಗೆ ಏನು ಮಾಡಬಲ್ಲಳು?””

01143004 ವೈಶಂಪಾಯನ ಉವಾಚ|

01143004a ಹಿಡಿಂಬಾ ತು ತತಃ ಕುಂತೀಮಭಿವಾದ್ಯ ಕೃತಾಂಜಲಿಃ|

01143004c ಯುಧಿಷ್ಠಿರಂ ಚ ಕೌಂತೇಯಮಿದಂ ವಚನಮಬ್ರವೀತ್||

ವೈಶಂಪಾಯನನು ಹೇಳಿದನು: “ಆಗ ಹಿಡಿಂಬೆಯು ಅಂಜಲೀ ಬದ್ಧಳಾಗಿ ಕುಂತಿ ಮತ್ತು ಕೌಂತೇಯ ಯುಧಿಷ್ಠಿರನಿಗೆ ಅಭಿವಂದಿಸಿ ಈ ಮಾತುಗಳನ್ನು ಹೇಳಿದಳು:

01143005a ಆರ್ಯೇ ಜಾನಾಸಿ ಯದ್ದುಃಖಮಿಹ ಸ್ತ್ರೀಣಾಮನಂಗಜಂ|

01143005c ತದಿದಂ ಮಾಮನುಪ್ರಾಪ್ತಂ ಭೀಮಸೇನಕೃತಂ ಶುಭೇ||

“ಆರ್ಯೆ! ಅನಂಗಜನಿಂದ ಸ್ತ್ರೀಯರು ಹೇಗೆ ದುಃಖವನ್ನು ಅನುಭವಿಸುತ್ತಾರೆ ಎನ್ನುವುದು ನಿನಗೆ ತಿಳಿದಿದೆ. ಶುಭೇ! ಭೀಮಸೇನನಿಂದಾಗಿ ನನಗೆ ಆ ದುಃಖವು ಪ್ರಾಪ್ತವಾಗಿದೆ.

01143006a ಸೋಢಂ ತತ್ಪರಮಂ ದುಃಖಂ ಮಯಾ ಕಾಲಪ್ರತೀಕ್ಷಯಾ|

01143006c ಸೋಽಯಮಭ್ಯಾಗತಃ ಕಾಲೋ ಭವಿತಾ ಮೇ ಸುಖಾಯ ವೈ||

ನನ್ನ ಸಮಯವನ್ನು ಪ್ರತೀಕ್ಷಿಸುತ್ತಾ ಆ ಪರಮ ದುಃಖವನ್ನು ನಾನು ಸಹಿಸಿಕೊಂಡಿದ್ದೇನೆ. ನನಗೆ ಸುಖವನ್ನು ನೀಡುವ ಆ ಸಮಯವು ಈಗ ಬಂದೊದಗಿದೆ.

01143007a ಮಯಾ ಹ್ಯುತ್ಸೃಜ್ಯ ಸುಹೃದಃ ಸ್ವಧರ್ಮಂ ಸ್ವಜನಂ ತಥಾ|

01143007c ವೃತೋಽಯಂ ಪುರುಷವ್ಯಾಘ್ರಸ್ತವ ಪುತ್ರಃ ಪತಿಃ ಶುಭೇ||

ಶುಭೇ! ನನ್ನ ಸುಹೃದಯರನ್ನು, ಸ್ವಧರ್ಮವನ್ನು, ಮತ್ತು ಸ್ವಜನರನ್ನು ತೊರೆದು ನಿನ್ನ ಪುರುಷವ್ಯಾಘ್ರ ಪುತ್ರನನ್ನು ಪತಿಯನ್ನಾಗಿ ವರಿಸಿದ್ದೇನೆ.

01143008a ವರೇಣಾಪಿ ತಥಾನೇನ ತ್ವಯಾ ಚಾಪಿ ಯಶಸ್ವಿನಿ|

01143008c ತಥಾ ಬ್ರುವಂತೀ ಹಿ ತದಾ ಪ್ರತ್ಯಾಖ್ಯಾತಾ ಕ್ರಿಯಾಂ ಪ್ರತಿ||

ನಾನು ವರಿಸಿದ ಅವನು ಮತ್ತು ಯಶಸ್ವಿನಿ ನೀನು ನಾನು ಮಾತನಾಡಿದ ಹಾಗೇ ನಡೆದುಕೊಳ್ಳುತ್ತೇನೆ ಎಂದು ನನ್ನನ್ನು ತಿರಸ್ಕರಿಸುತ್ತಿದ್ದೀರಾ

01143009a ತ್ವಂ ಮಾಂ ಮೂಢೇತಿ ವಾ ಮತ್ವಾ ಭಕ್ತಾ ವಾನುಗತೇತಿ ವಾ|

01143009c ಭರ್ತ್ರಾನೇನ ಮಹಾಭಾಗೇ ಸಂಯೋಜಯ ಸುತೇನ ತೇ||

ನನ್ನನ್ನು ನೀನು ಮೂಢಳೆಂದು ತಿಳಿಯಬಹುದು ಅಥವಾ ನಿನ್ನನ್ನೇ ಅನುಸರಿಸುವ ಭಕ್ತೆ ಎಂದು ತಿಳಿಯಬಹುದು. ಮಹಾಭಾಗೇ! ನಿನ್ನ ಸುತನನ್ನು ಪತಿಯನ್ನಾಗಿಸಿ ಸೇರಲು ಅನುಮತಿ ನೀಡು.

01143010a ತಮುಪಾದಾಯ ಗಚ್ಛೇಯಂ ಯಥೇಷ್ಟಂ ದೇವರೂಪಿಣಂ|

01143010c ಪುನಶ್ಚೈವಾಗಮಿಷ್ಯಾಮಿ ವಿಶ್ರಂಭಂ ಕುರು ಮೇ ಶುಭೇ||

ಆ ದೇವರೂಪಿಯನ್ನು ಬೇಕಾದಲ್ಲಿ ಕರೆದುಕೊಂಡು ಹೋಗುತ್ತೇನೆ. ಪುನಃ ನಾನು ಇಲ್ಲಿಗೇ ಬರುತ್ತೇನೆ. ನನ್ನಲ್ಲಿ ವಿಶ್ವಾಸವನ್ನಿಡು ಶುಭೇ!

01143011a ಅಹಂ ಹಿ ಮನಸಾ ಧ್ಯಾತಾ ಸರ್ವಾನ್ನೇಷ್ಯಾಮಿ ವಃ ಸದಾ|

01143011c ವೃಜಿನೇ ತಾರಯಿಷ್ಯಾಮಿ ದುರ್ಗೇಷು ಚ ನರರ್ಷಭಾನ್||

01143012a ಪೃಷ್ಠೇನ ವೋ ವಹಿಷ್ಯಾಮಿ ಶೀಘ್ರಾಂ ಗತಿಮಭೀಪ್ಸತಃ|

01143012c ಯೂಯಂ ಪ್ರಸಾದಂ ಕುರುತ ಭೀಮಸೇನೋ ಭಜೇತ ಮಾಂ||

ನೀನು ನನ್ನ ಕುರಿತು ಯೋಚಿಸಿದಾಗಲೆಲ್ಲಾ ನಾನು ಬಂದು ನಿಮ್ಮೆಲ್ಲರನ್ನೂ ಕರೆದೊಯ್ಯುತ್ತೇನೆ. ನಾನು ಈ ನರರ್ಷಭರಿಗೆ ದುರ್ಗಗಳನ್ನು ದಾಟಲು ಸಹಾಯ ಮಾಡುತ್ತೇನೆ. ಅಥವಾ ನಾನು ನನ್ನ ಬೆನ್ನಮೇಲೆ ಕೂರಿಸಿಕೊಂಡು ನೀವು ಎಲ್ಲಿ ಹೋಗಬೇಕೆಂದು ಬಯಸುವಿರೋ ಅಲ್ಲಿಗೆ ಶೀಘ್ರವಾಗಿ ಕರೆದೊಯ್ಯುತ್ತೇನೆ. ನೀವೆಲ್ಲರೂ ನನ್ನ ಮೇಲೆ ಕರುಣೆ ತೋರಿ! ಭೀಮಸೇನನು ನನ್ನನ್ನು ಪ್ರೀತಿಸುವಂತೆ ಮಾಡಿ.

01143013a ಆಪದಸ್ತರಣೇ ಪ್ರಾಣಾನ್ಧಾರಯೇದ್ಯೇನ ಯೇನ ಹಿ|

01143013c ಸರ್ವಮಾದೃತ್ಯ ಕರ್ತವ್ಯಂ ತದ್ಧರ್ಮಮನುವರ್ತತಾ||

01143014a ಆಪತ್ಸು ಯೋ ಧಾರಯತಿ ಧ್ರಮಂ ಧರ್ಮವಿದುತ್ತಮಃ|

01143014c ವ್ಯಸನಂ ಹ್ಯೇವ ಧರ್ಮಸ್ಯ ಧರ್ಮಿಣಾಮಾಪದುಚ್ಯತೇ||

01143015a ಪುಣ್ಯಂ ಪ್ರಾಣಾನ್ಧಾರಯತಿ ಪುಣ್ಯಂ ಪ್ರಾಣದಮುಚ್ಯತೇ|

01143015c ಯೇನ ಯೇನಾಚರೇದ್ಧರ್ಮಂ ತಸ್ಮಿನ್ಗರ್ಹಾ ನ ವಿದ್ಯತೇ||

ಆಪತ್ತಿನಿಂದ ಪಾರಾಗಲು ಯಾವರೀತಿಯಲ್ಲಾದರೂ ಪ್ರಾಣವನ್ನುಳಿಸಿ ಕೊಂಡಿರಬೇಕು. ಆಗ ಎಲ್ಲವನ್ನೂ ತನ್ನ ಕರ್ತವ್ಯ ಮತ್ತು ಧರ್ಮವೆಂದು ಅನುಸರಿಸಬಹುದು. ಆದರೆ ಆಪತ್ತಿನಲ್ಲಿ ತನ್ನ ಧರ್ಮವನ್ನು ಯಾರು ಪಾಲಿಸುತ್ತಾನೋ ಅವನೇ ಧರ್ಮವಿದುತ್ತಮ. ಯಾಕೆಂದರೆ ದರ್ಮಿಣಿಗೆ ಆಪತ್ತು ಧರ್ಮದ ವ್ಯಸನವೆಂದೇ ತೋರುತ್ತದೆ. ಪುಣ್ಯವು ಪ್ರಾಣವನ್ನು ಕೊಡುತ್ತದೆ, ಪುಣ್ಯವು ಪ್ರಾಣವನ್ನು ಉಳಿಸುತ್ತದೆ. ಅವನು ಯಾವರೀತಿಯಲ್ಲಿ ತನ್ನ ಧರ್ಮವನ್ನು ಪಾಲಿಸಿದರೂ ತಪ್ಪೆನಿಸಿಕೊಳ್ಳುವುದಿಲ್ಲ.”

01143016 ಯುಧಿಷ್ಠಿರ ಉವಾಚ|

01143016a ಏವಮೇತದ್ಯಥಾತ್ಥ ತ್ವಂ ಹಿಡಿಂಬೇ ನಾತ್ರ ಸಂಶಯಃ|

01143016c ಸ್ಥಾತವ್ಯಂ ತು ತ್ವಯಾ ಧರ್ಮೇ ಯಥಾ ಬ್ರೂಯಾಂ ಸುಮಧ್ಯಮೇ||

ಯುಧಿಷ್ಠಿರನು ಹೇಳಿದನು: “ಹಿಡಿಂಬೆ! ನೀನು ಹೇಳಿದ ಹಾಗೆಯೇ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಸುಮಧ್ಯಮೆ! ನೀನು ಹೇಳಿದ ಹಾಗೆ ಧರ್ಮದಲ್ಲಿಯೇ ನಿರತಳಾಗಿರು.

01143017a ಸ್ನಾತಂ ಕೃತಾಹ್ನಿಕಂ ಭದ್ರೇ ಕೃತಕೌತುಕಮಂಗಲಂ|

01143017c ಭೀಮಸೇನಂ ಭಜೇಥಾಸ್ತ್ವಂ ಪ್ರಾಗಸ್ತಗಮನಾದ್ರವೇಃ||

ಭದ್ರೇ! ಸ್ನಾನ ಮತ್ತು ಆಹ್ನೀಕವನ್ನು ಪೂರೈಸಿ ಕೌತುಕ ಮಂಗಲವನ್ನು ಮಾಡಿದವನಾಗಿ ಭೀಮಸೇನನು ಸೂರ್ಯ ಮುಳುಗುವುದರೊಳಗೆ ನಿನ್ನನ್ನು ಪ್ರೀತಿಸುತ್ತಾನೆ.

01143018a ಅಹಃಸು ವಿಹರಾನೇನ ಯಥಾಕಾಮಂ ಮನೋಜವಾ|

01143018c ಅಯಂ ತ್ವಾನಯಿತವ್ಯಸ್ತೇ ಭೀಮಸೇನಃ ಸದಾ ನಿಶಿ||

ಮನೋಜವೇ! ಹಗಲಿನಲ್ಲಿ ನೀನು ಅವನೊಡನೆ ನಿನಗಿಷ್ಟ ಬಂದಹಾಗೆ ವಿಹರಿಸಬಹುದು. ಆದರೆ ಪ್ರತಿ ರಾತ್ರಿಯೂ ಭೀಮಸೇನನನ್ನು ನೀನು ಪುನಃ ಇಲ್ಲಿಗೆ ತಲುಪಿಸಬೇಕು.””

01143019 ವೈಶಂಪಾಯನ ಉವಾಚ|

01143019a ತಥೇತಿ ತತ್ಪ್ರತಿಜ್ಞಾಯ ಹಿಡಿಂಬಾ ರಾಕ್ಷಸೀ ತದಾ|

01143019c ಭೀಮಸೇನಮುಪಾದಾಯ ಊರ್ಧ್ವಮಾಚಕ್ರಮೇ ತತಃ||

ವೈಶಂಪಾಯನನು ಹೇಳಿದನು: “ಹಾಗೆಯೇ ಆಗಲೆಂದು ಪ್ರತಿಜ್ಞೆ ಮಾಡಿ ರಾಕ್ಷಸಿ ಹಿಡಿಂಬೆಯು ಬೀಮಸೇನನನ್ನು ಎತ್ತಿಕೊಂಡು ಮೇಲೇರಿದಳು.

01143020a ಶೈಲಶೃಂಗೇಷು ರಮ್ಯೇಷು ದೇವತಾಯತನೇಷು ಚ|

01143020c ಮೃಗಪಕ್ಷಿವಿಘುಷ್ಟೇಷು ರಮಣೀಯೇಷು ಸರ್ವದಾ||

01143021a ಕೃತ್ವಾ ಚ ಪರಮಂ ರೂಪಂ ಸರ್ವಾಭರಣಭೂಷಿತಾ|

01143021c ಸಂಜಲ್ಪಂತೀ ಸುಮಧುರಂ ರಮಯಾಮಾಸ ಪಾಂಡವಂ||

ಸರ್ವಾಭರಣಭೂಷಿತಳಾಗಿ ಅತ್ಯಂತ ಸುಂದರ ರೂಪವನ್ನು ಪಡೆದು ಸುಮಧುರ ಪ್ರಣಯಮಾತುಗಳಿಂದ ಪಾಂಡವನನ್ನು ಪರ್ವತಗಳ ತುದಿಗಳಲ್ಲಿ, ರಮ್ಯ ದೇವ ಸ್ಥಳಗಳಲ್ಲಿ, ಮೃಗಪಕ್ಷಿಗಳ ಧ್ವನಿಗಳು ಸದಾ ಕೇಳಿ ಬರುತ್ತಿರುವ ಸ್ಥಳಗಳಲ್ಲಿ ರಮಿಸಿದಳು.

01143022a ತಥೈವ ವನದುರ್ಗೇಷು ಪುಷ್ಪಿತದ್ರುಮಸಾನುಷು|

01143022c ಸರಃಸು ರಮಣೀಯೇಷು ಪದ್ಮೋತ್ಪಲಯುತೇಷು ಚ||

01143023a ನದೀದ್ವೀಪಪ್ರದೇಶೇಷು ವೈಡೂರ್ಯಸಿಕತಾಸು ಚ|

01143023c ಸುತೀರ್ಥವನತೋಯಾಸು ತಥಾ ಗಿರಿನದೀಷು ಚ||

01143024a ಸಗರಸ್ಯ ಪ್ರದೇಶೇಷು ಮಣಿಹೇಮಚಿತೇಷು ಚ|

01143024c ಪತ್ತನೇಷು ಚ ರಮ್ಯೇಷು ಮಹಾಶಾಲವನೇಷು ಚ||

01143025a ದೇವಾರಣ್ಯೇಷು ಪುಣ್ಯೇಷು ತಥಾ ಪರ್ವತಸಾನುಷು|

01143025c ಗುಹ್ಯಕಾನಾಂ ನಿವಾಸೇಷು ತಾಪಸಾಯತನೇಷು ಚ||

01143026a ಸರ್ವರ್ತುಫಲಪುಷ್ಪೇಷು ಮಾನಸೇಷು ಸರಃಸು ಚ|

01143026c ಬಿಭ್ರತೀ ಪರಮಂ ರೂಪಂ ರಮಯಾಮಾಸ ಪಾಂಡವಂ||

ಹಾಗೆಯೇ ಪುಷ್ಪಭರಿತ ಮರಗಳನ್ನು ಹೊಂದಿದ ವನದುರ್ಗಗಳಲ್ಲಿ, ಅರಳುತ್ತಿರುವ ಕಮಲ ಮತ್ತು ಹೂಬಾಳೆಗಳಿಂದ ಕೂಡಿದ ರಮಣೀಯ ಸರೋವರಗಳಲ್ಲಿ, ವೈಢೂರ್ಯದ ಮರಳನ್ನು ಹೊಂದಿದ ನದಿ ದ್ವೀಪಪ್ರದೇಶಗಳಲ್ಲಿ, ಒಳ್ಳೆಯ ತೀರ್ಥವೆನಿಸಿಕೊಂಡ ವನಗಳಲ್ಲಿ ಹರಿಯುವ ನದಿಗಳಲ್ಲಿ, ಪರ್ವತಗಳಿಂದ ಹರಿದು ಬರುವ ನದಿಗಳಲ್ಲಿ, ಮಣಿರತ್ನಗಳ ರಾಶಿಯನ್ನೇ ಹೊಂದಿರುವ ಸಾಗರ ಪ್ರದೇಶಗಳಲ್ಲಿ, ರಮ್ಯ ಪಟ್ಟಣಗಳಲ್ಲಿ ಮತ್ತು ಶಾಲ ವೃಕ್ಷಗಳ ಮಹಾ ವನಗಳಲ್ಲಿ, ಪುಣ್ಯಕರ ದೇವಾರಣ್ಯಗಳಲ್ಲಿ ಮತ್ತು ಪರ್ವತ ಕಣಿವೆಗಳಲ್ಲಿ, ಗುಹ್ಯಕರ ನಿವಾಸ ಸ್ಥಳಗಳಲ್ಲಿ ಮತ್ತು ತಾಪಸಿಯರ ಆಶ್ರಮಗಳಲ್ಲಿ, ಸರ್ವ‌ಋತುಗಳ ಫಲಪುಷ್ಪಗಳಿಂದ ಭರಿತ ಮಾನಸ ಸರೋವರದಲ್ಲಿ ಅವಳು ಪರಮ ರೂಪದಿಂದ ಶೋಭಿತೆಯಾಗಿ ಪಾಂಡವನನ್ನು ರಮಿಸಿದಳು.

01143027a ರಮಯಂತೀ ತಥಾ ಭೀಮಂ ತತ್ರ ತತ್ರ ಮನೋಜವಾ|

01143027c ಪ್ರಜಜ್ಞೇ ರಾಕ್ಷಸೀ ಪುತ್ರಂ ಭೀಮಸೇನಾನ್ಮಹಾಬಲಂ||

ಭೀಮನೊಂದಿಗೆ ಎಲ್ಲೆಲ್ಲಿಯೂ ರಮಿಸಿದ ಆ ಮನೋಜವೆ ರಾಕ್ಷಸಿಯು ಮಹಾಬಲಿ ಭೀಮಸೇನನ ಪುತ್ರನಿಗೆ ಜನ್ಮವಿತ್ತಳು. 

01143028a ವಿರೂಪಾಕ್ಷಂ ಮಹಾವಕ್ತ್ರಂ ಶಂಕುಕರ್ಣಂ ವಿಭೀಷಣಂ|

01143028c ಭೀಮರೂಪಂ ಸುತಾಂರೋಷ್ಠಂ ತೀಕ್ಷ್ಣದಂಷ್ಟ್ರಂ ಮಹಾಬಲಂ||

01143029a ಮಹೇಷ್ವಾಸಂ ಮಹಾವೀರ್ಯಂ ಮಹಾಸತ್ತ್ವಂ ಮಹಾಭುಜಂ|

01143029c ಮಹಾಜವಂ ಮಹಾಕಾಯಂ ಮಹಾಮಾಯಮರಿಂದಮಂ||

ವಿರೋಪಾಕ್ಷನಾದ ಅವನಿಗೆ ಅಗಲವಾದ ಮುಖವಿತ್ತು. ಶಂಖುವಿನಂಥ ವಿಭೀಷಣ ಕಿವಿಗಳನ್ನು ಹೊಂದಿದ್ದನು. ಆ ಭೀಮರೂಪಿಣಿ ಮಹಾಬಲಿಯ ತುಟಿಗಳು ಕೆಂಪಾಗಿದ್ದವು ಮತ್ತು ಹಲ್ಲುಗಳು ಹರಿತವಾಗಿದ್ದವು. ಅವನು ಮಹೇಷ್ವಾಸನೂ, ಮಹಾವೀರ್ಯನೂ, ಮಹಾಸತ್ವನೂ, ಮಹಾಭುಜನೂ, ಮಹಾಜವನೂ, ಮಹಾಕಾಯನೂ, ಮಹಾಮಾಯಿಯೂ ಮತ್ತು ಅರಿಂದಮನೂ ಆಗಿದ್ದನು.

01143030a ಅಮಾನುಷಂ ಮಾನುಷಜಂ ಭೀಮವೇಗಂ ಮಹಾಬಲಂ|

01143030c ಯಃ ಪಿಶಾಚಾನತೀವಾನ್ಯಾನ್ಬಭೂವಾತಿ ಸ ಮಾನುಷಾನ್||

ಮನುಷ್ಯನಿಗೆ ಹುಟ್ಟಿದ ಆ ಅಮಾನುಷನು ಭೀಮ ವೇಗವನ್ನು ಹೊಂದಿದ್ದನು. ಮಹಾ ಬಲಶಾಲಿಯಾಗಿದ್ದನು. ಮನುಷ್ಯ-ಪಿಶಾಚಿಗಳನ್ನು ಮತ್ತು ಇತರ ರಾಕ್ಷಸರನ್ನು ಮೀರಿಸುವಂತಿದ್ದನು.

01143031a ಬಾಲೋಽಪಿ ಯೌವನಂ ಪ್ರಾಪ್ತೋ ಮಾನುಷೇಷು ವಿಶಾಂ ಪತೇ|

01143031c ಸರ್ವಾಸ್ತ್ರೇಷು ಪರಂ ವೀರಃ ಪ್ರಕರ್ಷಮಗಮದ್ಬಲೀ||

ವಿಶಾಂಪತೇ! ಅವನು ಬಾಲಕನಾಗಿದ್ದರೂ ಮನುಷ್ಯರಲ್ಲಿ ಯುವಕನಂತೆ ತೋರುತ್ತಿದ್ದನು. ಆ ವೀರ ಬಲಿಯು ಸರ್ವ ಅಸ್ತ್ರಗಳಲ್ಲಿ ಪರಮ ಪರಿಣತಿಯನ್ನು ಪಡೆದನು.

01143032a ಸದ್ಯೋ ಹಿ ಗರ್ಭಂ ರಾಕ್ಷಸ್ಯೋ ಲಭಂತೇ ಪ್ರಸವಂತಿ ಚ|

01143032c ಕಾಮರೂಪಧರಾಶ್ಚೈವ ಭವಂತಿ ಬಹುರೂಪಿಣಃ||

ರಾಕ್ಷಸಿಯರು ಗರ್ಭಧರಿಸಿದ ದಿನವೇ ಮಗುವಿಗೆ ಜನ್ಮ ನೀಡುತ್ತಾರೆ, ಮತ್ತು ಆ ಮಕ್ಕಳು ಬೇಕಾದ ರೂಪವನ್ನು, ಬೇರೆ ಬೇರೆ ರೂಪಗಳನ್ನು ಧರಿಸಬಹುದು.

01143033a ಪ್ರಣಮ್ಯ ವಿಕಚಃ ಪಾದಾವಗೃಹ್ಣಾತ್ಸ ಪಿತುಸ್ತದಾ|

01143033c ಮಾತುಶ್ಚ ಪರಮೇಷ್ವಾಸಸ್ತೌ ಚ ನಾಮಾಸ್ಯ ಚಕ್ರತುಃ||

ಬೋಳುಮಂಡೆಯ ಅವನು ತನ್ನ ತಂದೆ ತಾಯಿಗಳ ಪಾದಸ್ಪರ್ಷಮಾಡಿ ನಮಸ್ಕರಿಸಿದನು ಮತ್ತು ಅವರು ಆ ಪರಮೇಷ್ವಾಸನಿಗೆ ನಾಮಕರಣ ಮಾಡಿದರು.

01143034a ಘಟಭಾಸೋತ್ಕಚ ಇತಿ ಮಾತರಂ ಸೋಽಭ್ಯಭಾಷತ|

01143034c ಅಭವತ್ತೇನ ನಾಮಾಸ್ಯ ಘಟೋತ್ಕಚ ಇತಿ ಸ್ಮ ಹ||

ಅವನು ಘಟದಂತೆಯೇ ಹೊಳೆಯುತ್ತಿದ್ದಾನೆ ಎಂದು ಅವನು ತಾಯಿಗೆ ಹೇಳಿದನು, ಮತ್ತು ಹಾಗೆಯೇ ಅವನ ಹೆಸರು ಘಟೋತ್ಕಚ ಎಂದಾಯಿತು.

01143035a ಅನುರಕ್ತಶ್ಚ ತಾನಾಸೀತ್ಪಾಂಡವಾನ್ಸ ಘಟೋತ್ಕಚಃ|

01143035c ತೇಷಾಂ ಚ ದಯಿತೋ ನಿತ್ಯಂ ಆತ್ಮಭೂತೋ ಬಭೂವ ಸಃ||

ಘಟೋತ್ಕಚನು ಪಾಂಡವರಲ್ಲಿಯೇ ಅನುರಕ್ತನಾದನು ಮತ್ತು ಪಾಂಡವರೂ ಸಹ ಅವನನ್ನು ತುಂಬಾ ಪ್ರೀತಿಸುತ್ತಿದ್ದರು; ಅವನು ಅವರ ಆತ್ಮದಂತಿದ್ದನು.

01143036a ಸಂವಾಸಸಮಯೋ ಜೀರ್ಣ ಇತ್ಯಭಾಷತ ತಂ ತತಃ|

01143036c ಹಿಡಿಂಬಾ ಸಮಯಂ ಕೃತ್ವಾ ಸ್ವಾಂ ಗತಿಂ ಪ್ರತ್ಯಪದ್ಯತ||

ಆಗ ಹಿಡಿಂಬೆಯು ಅವನಿಗೆ ನಮ್ಮ ಒಟ್ಟು ಬಾಳ್ವೆಯ ಸಮಯವು ಮುಗಿಯಿತು ಎಂದು ಹೇಳಿ ಒಂದು ಒಪ್ಪಂದವನ್ನು ಮಾಡಿಕೊಂಡು ತನ್ನ ದಾರಿಯಲ್ಲಿ ಹೊರಟುಹೋದಳು.

01143037a ಕೃತ್ಯಕಾಲ ಉಪಸ್ಥಾಸ್ಯೇ ಪಿತೄನಿತಿ ಘಟೋತ್ಕಚಃ|

01143037c ಆಮಂತ್ರ್ಯ ರಾಕ್ಷಸಶ್ರೇಷ್ಠಃ ಪ್ರತಸ್ಥೇ ಚೋತ್ತರಾಂ ದಿಶಂ||

ಘಟೋತ್ಕಚನು ತನ್ನ ತಂದೆಗೆ “ಕರೆದಾಗಲೆಲ್ಲಾ ಬರುತ್ತೇನೆ!”ಎಂದು ವಚನವನ್ನಿತ್ತು ಉತ್ತರ ದಿಕ್ಕಿನ ಕಡೆಗೆ ಹೊರಟುಹೋದನು.

01143038a ಸ ಹಿ ಸೃಷ್ಟೋ ಮಘವತಾ ಶಕ್ತಿಹೇತೋರ್ಮಹಾತ್ಮನಾ|

01143038c ಕರ್ಣಸ್ಯಾಪ್ರತಿವೀರ್ಯಸ್ಯ ವಿನಾಶಾಯ ಮಹಾತ್ಮನಃ||

ತನ್ನ ಶಕ್ತ್ಯಾಸ್ತ್ರದ ಸಲುವಾಗಿ ಮಹಾತ್ಮ ಮಘವತನು ಅಪ್ರತಿಮ ವೀರ ಮಹಾತ್ಮ ಕರ್ಣನ ವಿನಾಶಕ್ಕಾಗಿ ಅವನನ್ನು ಸೃಷ್ಟಿಸಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಹಿಡಿಂಬವಧಪರ್ವಣಿ ಘಟೋತ್ಕಚೋತ್ಪತ್ತೌ ತ್ರಿಚತ್ವಾರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಹಿಡಿಂಬವಧಪರ್ವದಲ್ಲಿ ಘಟೋತ್ಕಚೋತ್ಪತ್ತಿ ಎನ್ನುವ ನೂರಾನಲ್ವತ್ತ್ಮೂರನೆಯ ಅಧ್ಯಾಯವು.

Related image

Comments are closed.