Adi Parva: Chapter 133

ಆದಿ ಪರ್ವ: ಜತುಗೃಹ ಪರ್ವ

೧೩೩

ಅನುಸರಿಸಿ ಬಂದ ಪೌರಜನರನ್ನು ಯುಧಿಷ್ಠಿರನು ಹಿಂದೆ ಕಳುಹಿಸಿದುದು (೧-೧೭). ಪಾಂಡವರು ಹೊರಡುವಾಗ ವಿದುರನು ಮ್ಲೇಚ್ಛ ಭಾಷೆಯಲ್ಲಿ ಯುಧಿಷ್ಠಿರನಿಗೆ ಒಗಟಿನ ರೂಪದಲ್ಲಿ ದುರ್ಯೋಧನನ ಶಲ್ಯಂತ್ರದ ಕುರಿತು ಎಚ್ಚರಿಸಿದುದು (೧೮-೩೦).

01133001 ವೈಶಂಪಾಯನ ಉವಾಚ|

01133001a ಪಾಂಡವಾಸ್ತು ರಥಾನ್ಯುಕ್ತ್ವಾ ಸದಶ್ವೈರನಿಲೋಪಮೈಃ|

01133001c ಆರೋಹಮಾಣಾ ಭೀಷ್ಮಸ್ಯ ಪಾದೌ ಜಗೃಹುರಾರ್ತವತ್||

01133002a ರಾಜ್ಞಶ್ಚ ಧೃತರಾಷ್ಟ್ರಸ್ಯ ದ್ರೋಣಸ್ಯ ಚ ಮಹಾತ್ಮನಃ|

01133002c ಅನ್ಯೇಷಾಂ ಚೈವ ವೃದ್ಧಾನಾಂ ವಿದುರಸ್ಯ ಕೃಪಸ್ಯ ಚ||

ವೈಶಂಪಾಯನನು ಹೇಳಿದನು: “ಅನಿಲೋಪಮ ಉತ್ತಮ ಅಶ್ವಗಳನ್ನು ಕಟ್ಟಿದ್ದ ರಥಗಳನ್ನು ಏರುವಾಗ ಆರ್ತ ಪಾಂಡವರು ಭೀಷ್ಮ, ರಾಜ ಧೃತರಾಷ್ಟ್ರ, ಮಹಾತ್ಮ ದ್ರೋಣ, ವಿದುರ, ಕೃಪ ಮತ್ತು ಅನ್ಯ ವೃದ್ಧರ ಪಾದಗಳಿಗೆರಗಿದರು.

01133003a ಏವಂ ಸರ್ವಾನ್ಕುರೂನ್ವೃದ್ಧಾನಭಿವಾದ್ಯ ಯತವ್ರತಾಃ|

01133003c ಸಮಾಲಿಂಗ್ಯ ಸಮಾನಾಂಶ್ಚ ಬಾಲೈಶ್ಚಾಪ್ಯಭಿವಾದಿತಾಃ||

ಹೀಗೆ ಎಲ್ಲ ಕುರುವೃದ್ಧರಿಗೂ ಅಭಿವಂದಿಸಿ ಯತವ್ರತರು ಸಮಾನರನ್ನು ಆಲಿಂಗಿಸಿದರು ಮತ್ತು ಕಿರಿಯರಿಂದ ಅಭಿವಂದಿಸಲ್ಪಟ್ಟರು.

01133004a ಸರ್ವಾ ಮಾತೄಸ್ತಥಾಪೃಷ್ಟ್ವಾ ಕೃತ್ವಾ ಚೈವ ಪ್ರದಕ್ಷಿಣಂ|

01133004c ಸರ್ವಾಃ ಪ್ರಕೃತಯಶ್ಚೈವ ಪ್ರಯಯುರ್ವಾರಣಾವತಂ||

ಎಲ್ಲ ತಾಯಂದಿರಿಗೂ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ ಎಲ್ಲ ಪ್ರಜೆಗಳಿಂದ ಬೀಳ್ಕೊಂಡು ವಾರಣಾವತಕ್ಕೆ ಹೊರಟರು.

01133005a ವಿದುರಶ್ಚ ಮಹಾಪ್ರಾಜ್ಞಸ್ತಥಾನ್ಯೇ ಕುರುಪುಂಗವಾಃ|

01133005c ಪೌರಾಶ್ಚ ಪುರುಷವ್ಯಾಘ್ರಾನನ್ವಯುಃ ಶೋಕಕರ್ಶಿತಾಃ||

ಮಹಾಪ್ರಾಜ್ಞ ವಿದುರ, ಅನ್ಯ ಕುರುಪುಂಗವರು ಮತ್ತು ಶೋಕಾರ್ತ ಪೌರರು ಆ ಪುರುಷವ್ಯಾಘ್ರರನ್ನು ಹಿಂಬಾಲಿಸಿದರು.

01133006a ತತ್ರ ಕೇಚ್ಚಿದ್ಬ್ರುವಂತಿ ಸ್ಮ ಬ್ರಾಹ್ಮಣಾ ನಿರ್ಭಯಾಸ್ತದಾ|

01133006c ಶೋಚಮಾನಾಃ ಪಾಂಡುಪುತ್ರಾನತೀವ ಭರತರ್ಷಭ||

ಭರತರ್ಷಭ! ಅಲ್ಲಿಯೇ ಇದ್ದ ಕೆಲ ನಿರ್ಭಯ ಬ್ರಾಹ್ಮಣರು ಪಾಂಡುಪುತ್ರರಿಗಾಗಿ ಅತೀವ ದುಃಖಿತರಾಗಿ ಹೇಳಿಕೊಳ್ಳುತ್ತಿದ್ದರು:

01133007a ವಿಷಮಂ ಪಶ್ಯತೇ ರಾಜಾ ಸರ್ವಥಾ ತಮಸಾವೃತಃ|

01133007c ಧೃತರಾಷ್ಟ್ರಃ ಸುದುರ್ಬುದ್ಧಿರ್ನ ಚ ಧರ್ಮಂ ಪ್ರಪಶ್ಯತಿ||

“ವಿಷಮ ರಾಜ ಧೃತರಾಷ್ಟ್ರನು ಎಲ್ಲೆಡೆಯಲ್ಲಿಯೂ ಕತ್ತಲೆಯನ್ನೇ ಕಾಣುತ್ತಿದ್ದಾನೆ. ದುರ್ಭುದ್ಧಿಯು ಧರ್ಮವನ್ನೇ ನೋಡುವುದಿಲ್ಲ.

01133008a ನ ಹಿ ಪಾಪಮಪಾಪಾತ್ಮಾ ರೋಚಯಿಷ್ಯತಿ ಪಾಂಡವಃ|

01133008c ಭೀಮೋ ವಾ ಬಲಿನಾಂ ಶ್ರೇಷ್ಠಃ ಕೌಂತೇಯೋ ವಾ ಧನಂಜಯಃ|

01133008e ಕುತ ಏವ ಮಹಾಪ್ರಾಜ್ಞೌ ಮಾದ್ರೀಪುತ್ರೌ ಕರಿಷ್ಯತಃ||

ಅಪಾಪಾತ್ಮ ಪಾಂಡವನು ಪಾಪಗೈಯುವವನೇ ಅಲ್ಲ; ಬಲಿಗಳಲ್ಲಿ ಶ್ರೇಷ್ಠ ಭೀಮನಾಗಲೀ, ಕೌಂತೇಯ ಧನಂಜಯನಾಗಲೀ, ಮಹಾಪ್ರಾಜ್ಞ ಮಾದ್ರೀಪುತ್ರರಾಗಲೀ ಪಾಪವನ್ನೆಂದೂ ಎಸಗುವುದಿಲ್ಲ.

01133009a ತದ್ರಾಜ್ಯಂ ಪಿತೃತಃ ಪ್ರಾಪ್ತಂ ಧೃತರಾಷ್ಟ್ರೋ ನ ಮೃಷ್ಯತೇ|

01133009c ಅಧರ್ಮಮಖಿಲಂ ಕಿಂ ನು ಭೀಷ್ಮೋಽಯಮನುಮನ್ಯತೇ|

01133009e ವಿವಾಸ್ಯಮಾನಾನಸ್ಥಾನೇ ಕೌಂತೇಯಾನ್ಭರತರ್ಷಭಾನ್||

ಅವರು ಪಿತೃವಿನಿಂದ ರಾಜ್ಯವನ್ನು ಪಡೆದಿದ್ದುದು ಧೃತರಾಷ್ಟ್ರನಿಗೆ ಸಹಿಸಲಿಕ್ಕಾಗಲಿಲ್ಲ. ಭರತರ್ಷಭ ಕೌಂತೇಯರನ್ನು ಏನೂ ಕಾರಣವಿಲ್ಲದೇ ಹೊರಗಟ್ಟುವ ಈ ಅತಿದೊಡ್ಡ ಅಧರ್ಮಕ್ಕೆ ಭೀಷ್ಮನಾದರೂ ಹೇಗೆ ಅನುಮತಿಯನ್ನಿತ್ತ?

01133010a ಪಿತೇವ ಹಿ ನೃಪೋಽಸ್ಮಾಕಮಭೂಚ್ಛಾಂತನವಃ ಪುರಾ|

01133010c ವಿಚಿತ್ರವೀರ್ಯೋ ರಾಜರ್ಷಿಃ ಪಾಂಡುಶ್ಚ ಕುರುನಂದನಃ||

ಹಿಂದೆ ಶಾಂತನವ ವಿಚಿತ್ರವೀರ್ಯ ಮತ್ತು ಕುರುನಂದನ ಪಾಂಡು ಇಬ್ಬರೂ ನಮ್ಮ ತಂದೆಗಳಂತಿದ್ದರು.

01133011a ಸ ತಸ್ಮಿನ್ಪುರುಷವ್ಯಾಘ್ರೇ ದಿಷ್ಟಭಾವಂ ಗತೇ ಸತಿ|

01133011c ರಾಜಪುತ್ರಾನಿಮಾನ್ಬಾಲಾನ್ಧೃತರಾಷ್ಟ್ರೋ ನ ಮೃಷ್ಯತೇ||

ಆ ಪುರುಷವ್ಯಾಘ್ರನು ದೈವಾಧೀನನಾದ ನಂತರ ಬಾಲಕರಾದ ಈ ರಾಜಪುತ್ರರನ್ನು ಧೃತರಾಷ್ಟ್ರನಿಗೆ ಸಹಿಸಲಾಗುತ್ತಿಲ್ಲ.

01133012a ವಯಮೇತದಮೃಷ್ಯಂತಃ ಸರ್ವ ಏವ ಪುರೋತ್ತಮಾತ್|

01133012c ಗೃಹಾನ್ವಿಹಾಯ ಗಚ್ಛಾಮೋ ಯತ್ರ ಯಾತಿ ಯುಧಿಷ್ಠಿರಃ||

ನಮಗೆ ಕೂಡ ಅವನನ್ನು ಸಹಿಸಲಾಗುತ್ತಿಲ್ಲ. ನಾವೆಲ್ಲರೂ ಈ ಉತ್ತಮ ನಗರಿ- ಮನೆಗಳನ್ನು ತೊರೆದು ಯುಧಿಷ್ಠಿರನು ಹೋಗುವಲ್ಲಿಗೆ ಹೋಗೋಣ.”

01133013a ತಾಂಸ್ತಥಾವಾದಿನಃ ಪೌರಾನ್ದುಃಖಿತಾನ್ದುಃಖಕರ್ಶಿತಃ|

01133013c ಉವಾಚ ಪರಮಪ್ರೀತೋ ಧರ್ಮರಾಜೋ ಯುಧಿಷ್ಠಿರಃ||

ದುಃಖಿತ ಪೌರರು ಈ ರೀತಿ ಮಾತನಾಡಿಕೊಳ್ಳುತ್ತಿರುವಾಗ ದುಃಖಕರ್ಶಿತ ಧರ್ಮರಾಜ ಯುಧಿಷ್ಠಿರನು ಪರಮಪ್ರೀತನಾಗಿ ಹೇಳಿದನು:

01133014a ಪಿತಾ ಮಾನ್ಯೋ ಗುರುಃ ಶ್ರೇಷ್ಠೋ ಯದಾಹ ಪೃಥಿವೀಪತಿಃ|

01133014c ಅಶಂಕಮಾನೈಸ್ತತ್ಕಾರ್ಯಮಸ್ಮಾಭಿರಿತಿ ನೋ ವ್ರತಂ||

“ಗುರುವಿನಂತೆ ಶ್ರೇಷ್ಠ ಪೃಥ್ವೀಪತಿಯನ್ನು ತಂದೆಯಂತೆ ಮನ್ನಿಸಬೇಕು. ಅವನು ನನಗೆ ಏನನ್ನು ಹೇಳುತ್ತಾನೋ ಅದನ್ನು ಸ್ವಲ್ಪವೂ ಶಂಕಿಸದೇ ಮಾಡುತ್ತೇವೆ ಎನ್ನುವುದು ನಮ್ಮ ವ್ರತ.

01133015a ಭವಂತಃ ಸುಹೃದೋಽಸ್ಮಾಕಮಸ್ಮಾನ್ಕೃತ್ವಾ ಪ್ರದಕ್ಷಿಣಂ|

01133015c ಆಶೀರ್ಭಿರಭಿನಂದ್ಯಾಸ್ಮಾನ್ನಿವರ್ತಧ್ವಂ ಯಥಾಗೃಹಂ||

ನೀವು ನಮ್ಮ ಸುಹೃದಯರು. ನಮಗೆ ಪ್ರದಕ್ಷಿಣೆ ಮಾಡಿ ಆಶೀರ್ವದಿಸಿ ನಮ್ಮನ್ನು ಅಭಿನಂದಿಸಿ ನಿಮ್ಮ ನಿಮ್ಮ ಮನೆಗಳಿಗೆ ತೆರಳಿ.

01133016a ಯದಾ ತು ಕಾರ್ಯಮಸ್ಮಾಕಂ ಭವದ್ಭಿರುಪಪತ್ಸ್ಯತೇ|

01133016c ತದಾ ಕರಿಷ್ಯಥ ಮಮ ಪ್ರಿಯಾಣಿ ಚ ಹಿತಾನಿ ಚ||

ನಿಮ್ಮಿಂದ ನಮಗೆ ಯಾವಾಗಲಾದರೂ ಕಾರ್ಯವಾಗಬೇಕೆಂದಾಗ ನನಗೆ ಪ್ರಿಯ ಮತ್ತು ಹಿತಕರವಾದವುಗಳನ್ನು ಮಾಡುವಿರಂತೆ.”

01133017a ತೇ ತಥೇತಿ ಪ್ರತಿಜ್ಞಾಯ ಕೃತ್ವಾ ಚೈತಾನ್ಪ್ರದಕ್ಷಿಣಂ|

01133017c ಆಶೀರ್ಭಿರಭಿನಂದ್ಯೈನಾಂಜಗ್ಮುರ್ನಗರಮೇವ ಹಿ||

ಅವರು ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ ಅವರಿಗೆ ಪ್ರದಕ್ಷಿಣೆ ಮಾಡಿ ಆಶೀರ್ವದಿಸಿ-ಅಭಿನಂದಿಸಿ ನಗರಕ್ಕೆ ಹಿಂದಿರುಗಿದರು.

01133018a ಪೌರೇಷು ತು ನಿವೃತ್ತೇಷು ವಿದುರಃ ಸರ್ವಧರ್ಮವಿತ್|

01133018c ಬೋಧಯನ್ಪಾಂಡವಶ್ರೇಷ್ಠಮಿದಂ ವಚನಮಬ್ರವೀತ್|

01133018e ಪ್ರಾಜ್ಞಃ ಪ್ರಾಜ್ಞಂ ಪ್ರಲಾಪಜ್ಞಃ ಸಮ್ಯಗ್ಧರ್ಮಾರ್ಥದರ್ಶಿವಾನ್||

ಪೌರರು ಹಿಂದಿರುಗಿದ ನಂತರ ಸರ್ವ ಧರ್ಮವಿದು ವಿದುರನು ಪಾಂಡವಶ್ರೇಷ್ಠನಿಗೆ ಬೋಧಿಸುತ್ತಾ ಪ್ರಾಜ್ಞನು ಧರ್ಮಾರ್ಥದರ್ಶಿ ಒಗಟುಗಳನ್ನು ಅರಿಯಬಲ್ಲ ಪ್ರಾಜ್ಞನಿಗೆ ಹೇಳುವಂತೆ ಈ ಮಾತುಗಳನ್ನಾಡಿದನು:

01133019a ವಿಜ್ಞಾಯೇದಂ ತಥಾ ಕುರ್ಯಾದಾಪದಂ ನಿಸ್ತರೇದ್ಯಥಾ|

01133019c ಅಲೋಹಂ ನಿಶಿತಂ ಶಸ್ತ್ರಂ ಶರೀರಪರಿಕರ್ತನಂ|

01133019e ಯೋ ವೇತ್ತಿ ನ ತಮಾಘ್ನಂತಿ ಪ್ರತಿಘಾತವಿದಂ ದ್ವಿಷಃ||

“ತಿಳಿದಿರುವವನು ಆಪತ್ತನ್ನು ಗೆಲ್ಲಲು ಪ್ರಯತ್ನಿಸುತ್ತಾನೆ. ಲೋಹವಲ್ಲದ ಆದರೂ ಮೊನಚಾದ ಶಸ್ತ್ರವೊಂದು ಶರೀರವನ್ನು ಆವರಿಸಿದೆ. ಇದನ್ನು ತಿಳಿದವನನ್ನು ಯಾವ ಆಯುಧವೂ ಕೊಲ್ಲುವುದಿಲ್ಲ ಆದರೆ ಶತ್ರುವನ್ನು ಎದುರಿಸುತ್ತದೆ.

01133020a ಕಕ್ಷಘ್ನಃ ಶಿಶಿರಘ್ನಶ್ಚ ಮಹಾಕಕ್ಷೇ ಬಿಲೌಕಸಃ|

01133020c ನ ದಹೇದಿತಿ ಚಾತ್ಮಾನಂ ಯೋ ರಕ್ಷತಿ ಸ ಜೀವತಿ||

ಕಕ್ಷಗಳನ್ನು ಮತ್ತು ಛಳಿಯನ್ನು ಕೊಲ್ಲುವಂತಹ ಆಯುಧವು ವಿಶಾಲ ಬಿಲದಲ್ಲಿರುವುದನ್ನು ಕೊಲ್ಲುವುದಿಲ್ಲ ಎಂದು ತಿಳಿದವನು ತನ್ನನ್ನು ತಾನೇ ರಕ್ಷಿಸಿಕೊಂಡು ಜೀವಿಸುತ್ತಾನೆ.

01133021a ನಾಚಕ್ಷುರ್ವೇತ್ತಿ ಪಂಥಾನಂ ನಾಚಕ್ಷುರ್ವಿಂದತೇ ದಿಶಃ|

01133021c ನಾಧೃತಿರ್ಭೂತಿಮಾಪ್ನೋತಿ ಬುಧ್ಯಸ್ವೈವಂ ಪ್ರಬೋಧಿತಃ||

ಕುರುಡನಿಗೆ ದಾರಿ ಕಾಣುವುದಿಲ್ಲ, ಕುರುಡನಿಗೆ ದಿಕ್ಕೇ ಕಾಣುವುದಿಲ್ಲ ಮತ್ತು ತನ್ನ ರಕ್ಷಣೆಯನ್ನು ಮಾಡಿಕೊಳ್ಳದಿರುವವನು ಶ್ರೇಯಸ್ಸನ್ನು ಹೊಂದಲಾರ. ಇದನ್ನು ತಿಳಿದು ಜಾಗರೂಕನಾಗಿರು.

01133022a ಅನಾಪ್ತೈರ್ದತ್ತಮಾದತ್ತೇ ನರಃ ಶಸ್ತ್ರಮಲೋಹಜಂ|

01133022c ಶ್ವಾವಿಚ್ಶರಣಮಾಸಾದ್ಯ ಪ್ರಮುಚ್ಯೇತ ಹುತಾಶನಾತ್||

ನರನು ಆಪ್ತರಲ್ಲದವರಿಂದ ಕೊಡಲ್ಪಟ್ಟ ಲೋಹವಲ್ಲದ ಈ ಶಸ್ತ್ರವನ್ನು ತೆಗೆದುಕೊಂಡು ಮುಳ್ಳುಹಂದಿಯ ಆಸರೆಯನ್ನು ಪಡೆದು ಬೆಂಕಿಯಿಂದ ಬಿಡುಗಡೆ ಹೊಂದುತ್ತಾನೆ.

01133023a ಚರನ್ಮಾರ್ಗಾನ್ವಿಜಾನಾತಿ ನಕ್ಷತ್ರೈರ್ವಿಂದತೇ ದಿಶಃ|

01133023c ಆತ್ಮನಾ ಚಾತ್ಮನಃ ಪಂಚ ಪೀಡಯನ್ನಾನುಪೀಡ್ಯತೇ||

ನಡೆಯುತ್ತಿರುವ ಮಾರ್ಗಗಳನ್ನು ಮತ್ತು ದಿಕ್ಕುಗಳನ್ನು ನಕ್ಷತ್ರಗಳ ಮೂಲಕ ತಿಳಿದುಕೊಳ್ಳುತ್ತಾನೆ; ತಾನೇ ತನ್ನ ಪಂಚ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಮುಳುಗಿಹೋಗುವುದರಿಂದ ತನ್ನನ್ನು ರಕ್ಷಿಸಿಕೊಳ್ಳುತ್ತಾನೆ.”

01133024a ಅನುಶಿಷ್ಟ್ವಾನುಗತ್ವಾ ಚ ಕೃತ್ವಾ ಚೈನಾನ್ಪ್ರದಕ್ಷಿಣಂ|

01133024c ಪಾಂಡವಾನಭ್ಯನುಜ್ಞಾಯ ವಿದುರಃ ಪ್ರಯಯೌ ಗೃಹಾನ್||

ಅವರನ್ನು ಅನುಸರಿಸಿ ಹೋಗುತ್ತಿರುವಾಗ ಈ ಸೂಚನೆಗಳನ್ನಿತ್ತ ವಿದುರನು ಪಾಂಡವರಿಗೆ ಪ್ರದಕ್ಷಿಣೆಮಾಡಿ ಅವರನ್ನು ಬೀಳ್ಕೊಟ್ಟು ತನ್ನ ಮನೆಗೆ ಹಿಂದಿರುಗಿದನು.

01133025a ನಿವೃತ್ತೇ ವಿದುರೇ ಚೈವ ಭೀಷ್ಮೇ ಪೌರಜನೇ ತಥಾ|

01133025c ಅಜಾತಶತ್ರುಮಾಮಂತ್ರ್ಯ ಕುಂತೀ ವಚನಮಬ್ರವೀತ್||

ವಿದುರ, ಭೀಷ್ಮ, ಮತ್ತು ಪೌರಜನರು ಹಿಂದಿರುಗಿದ ನಂತರ ಕುಂತಿಯು ಅಜಾತಶತ್ರುವನ್ನು ಕರೆದು ಕೇಳಿದಳು:

01133026a ಕ್ಷತ್ತಾ ಯದಬ್ರವೀದ್ವಾಕ್ಯಂ ಜನಮಧ್ಯೇಽಬ್ರುವನ್ನಿವ|

01133026c ತ್ವಯಾ ಚ ತತ್ತಥೇತ್ಯುಕ್ತೋ ಜಾನೀಮೋ ನ ಚ ತದ್ವಯಂ||

“ಜನರ ಮಧ್ಯದಲ್ಲಿ ಕ್ಷತ್ತನು ಏನು ಹೇಳಿದನು? ನೀನು ಅದಕ್ಕೆ ಹಾಗೆಯೇ ಆಗಲಿ ಎಂದೆ. ನಮಗೆ ಇದು ಅರ್ಥವಾಗಲಿಲ್ಲ!

01133027a ಯದಿ ತಚ್ಛಕ್ಯಮಸ್ಮಾಭಿಃ ಶ್ರೋತುಂ ನ ಚ ಸದೋಷವತ್|

01133027c ಶ್ರೋತುಮಿಚ್ಛಾಮಿ ತತ್ಸರ್ವಂ ಸಂವಾದಂ ತವ ತಸ್ಯ ಚ||

ನಾವೆಲ್ಲರೂ ಅದನ್ನು ಕೇಳಬಹುದಂಥದ್ದಾಗಿದ್ದರೆ, ಕೆಟ್ಟ ವಿಷಯವಲ್ಲದಿದ್ದರೆ ನಿನ್ನ ಮತ್ತು ಅವನ ಸಂವಾದವೆಲ್ಲವನ್ನು ತಿಳಿಯಲು ಬಯಸುತ್ತೇನೆ.”

01133028 ಯುಧಿಷ್ಠಿರ ಉವಾಚ|

01133028a ವಿಷಾದಗ್ನೇಶ್ಚ ಬೋದ್ಧವ್ಯಮಿತಿ ಮಾಂ ವಿದುರೋಽಬ್ರವೀತ್|

01133028c ಪಂಥಾಶ್ಚ ವೋ ನಾವಿದಿತಃ ಕಶ್ಚಿತ್ಸ್ಯಾದಿತಿ ಚಾಬ್ರವೀತ್||

ಯುಧಿಷ್ಠಿರನು ಹೇಳಿದನು: “ವಿದುರನು ನನಗೆ ವಿಷ ಮತ್ತು ಅಗ್ನಿಗಳ ಕುರಿತು ಜಾಗರೂಕನಾಗಿರಲು ಹೇಳಿದನು. ದಾರಿಗಳ್ಯಾವುವೂ ನನಗೆ ತಿಳಿಯದೆ ಇರಬಾರದೆಂದೂ ಹೇಳಿದನು.

01133029a ಜಿತೇಂದ್ರಿಯಶ್ಚ ವಸುಧಾಂ ಪ್ರಾಪ್ಸ್ಯಸೀತಿ ಚ ಮಾಬ್ರವೀತ್|

01133029c ವಿಜ್ಞಾತಮಿತಿ ತತ್ಸರ್ವಮಿತ್ಯುಕ್ತೋ ವಿದುರೋ ಮಯಾ||

ಜಿತೇಂದ್ರಿಯನಾಗಿದ್ದು ವಸುಧೆಯನ್ನು ಪ್ರಾಪ್ತಗೊಳಿಸಿಕೊಳ್ಳಬಹುದು ಎಂದೂ ಹೇಳಿದನು. ಅವೆಲ್ಲವೂ ಅರ್ಥವಾಯಿತೆಂದು ನಾನು ವಿದುರನಿಗೆ ಉತ್ತರವಿತ್ತೆ.””

01133030 ವೈಶಂಪಾಯನ ಉವಾಚ|

01133030a ಅಷ್ಟಮೇಽಹನಿ ರೋಹಿಣ್ಯಾಂ ಪ್ರಯಾತಾಃ ಫಲ್ಗುನಸ್ಯ ತೇ|

01133030c ವಾರಣಾವತಮಾಸಾದ್ಯ ದದೃಶುರ್ನಾಗರಂ ಜನಂ||

ವೈಶಂಪಾಯನನು ಹೇಳಿದನು: “ಫಲ್ಗುಣದ ಎಂಟನೇ ದಿನ ರೋಹಿಣೀ ನಕ್ಷತ್ರದಲ್ಲಿ ಅವರು ವಾರಣಾವತವನ್ನು ಸೇರಿ ನಗರ ಮತ್ತು ಜನರನ್ನು ನೋಡಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ವಾರಣಾವತಗಮನೇ ತ್ರಯಸ್ತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ವಾರಣಾವತಗಮನ ಎನ್ನುವ ನೂರಾಮೂವತ್ತ್ಮೂರನೆಯ ಅಧ್ಯಾಯವು.

Related image

Comments are closed.