Adi Parva: Chapter 117

ಆದಿ ಪರ್ವ: ಸಂಭವ ಪರ್ವ

೧೧೭

ತಾಪಸರು ಪಾಂಡವರನ್ನೂ ಕುಂತಿಯನ್ನೂ ಕರೆದುಕೊಂಡು ಹಸ್ತಿನಾಪುರವನ್ನು ತಲುಪುವುದು (೧-೮). ಪಾಂಡವರ ಜನನ ಮತ್ತು ಪಾಂಡು-ಮಾದ್ರಿಯರ ಮರಣದ ಕುರಿತು ಹೇಳಿ, ಕುಂತಿ ಮತ್ತು ಪಾಂಡವರು ಅಲ್ಲಿಯೇ ಬಿಟ್ಟು ತಾಪಸರು ಅಂತರ್ಧಾನರಾದುದು (೯-೩೩).

01117001 ವೈಶಂಪಾಯನ ಉವಾಚ|

01117001a ಪಾಂಡೋರವಭೃಥಂ ಕೃತ್ವಾ ದೇವಕಲ್ಪಾ ಮಹರ್ಷಯಃ|

01117001c ತತೋ ಮಂತ್ರಮಕುರ್ವಂತ ತೇ ಸಮೇತ್ಯ ತಪಸ್ವಿನಃ||

ವೈಶಂಪಾಯನನು ಹೇಳಿದನು: “ದೇವಕಲ್ಪಿ ಮಹರ್ಷಿಗಳು ಪಾಂಡುವಿನ ಅಂತ್ಯಕ್ರಿಯೆಗಳನ್ನು ನೆರವೇರಿಸಿದರು. ನಂತರ ತಪಸ್ವಿಗಳು ಒಂದುಗೂಡಿ ಸಮಾಲೋಚಿಸಿದರು.

01117002a ಹಿತ್ವಾ ರಾಜ್ಯಂ ಚ ರಾಷ್ಟ್ರಂ ಚ ಸ ಮಹಾತ್ಮಾ ಮಹಾತಪಾಃ|

01117002c ಅಸ್ಮಿನ್ ಸ್ಥಾನೇ ತಪಸ್ತಪ್ತುಂ ತಾಪಸಾಂಶರಣಂ ಗತಃ||

“ಆ ಮಹಾತ್ಮ ಮಹಾತಪಸ್ವಿಯು ರಾಜ್ಯ ಮತ್ತು ರಾಷ್ಟ್ರಗಳನ್ನು ತ್ಯಜಿಸಿ ಈ ಸ್ಥಾನದಲ್ಲಿ ತಪಸ್ಸನ್ನು ತಪಿಸಲು ತಾಪಸರ ಶರಣಾಗಿ ಬಂದಿದ್ದನು.

01117003a ಸ ಜಾತಮಾತ್ರಾನ್ಪುತ್ರಾಂಶ್ಚ ದಾರಾಂಶ್ಚ ಭವತಾಮಿಹ|

01117003c ಪ್ರದಾಯೋಪನಿಧಿಂ ರಾಜಾ ಪಾಂಡುಃ ಸ್ವರ್ಗಮಿತೋ ಗತಃ||

ಈಗಷ್ಟೇ ಜನಿಸಿದ ಮಕ್ಕಳನ್ನು ಮತ್ತು ಪತ್ನಿಯನ್ನು ನಮ್ಮ ರಕ್ಷಣೆಯಲ್ಲಿಟ್ಟು ರಾಜ ಪಾಂಡುವು ಸ್ವರ್ಗವನ್ನು ಸೇರಿದ್ದಾನೆ.”

01117004a ತೇ ಪರಸ್ಪರಮಾಮಂತ್ರ್ಯ ಸರ್ವಭೂತಹಿತೇ ರತಾಃ|

01117004c ಪಾಂಡೋಃ ಪುತ್ರಾನ್ಪುರಸ್ಕೃತ್ಯ ನಗರಂ ನಾಗಸಾಹ್ವಯಂ||

01117005a ಉದಾರಮನಸಃ ಸಿದ್ಧಾ ಗಮನೇ ಚಕ್ರಿರೇ ಮನಃ|

01117005c ಭೀಷ್ಮಾಯ ಪಾಂಡವಾನ್ದಾತುಂ ಧೃತರಾಷ್ಟ್ರಾಯ ಚೈವ ಹಿ||

ಸರ್ವ ಜೀವಿಗಳ ಹಿತೋರತ, ಉದಾರ ಮನಸ್ಕ, ಮನಸ್ಸಿನಲ್ಲಿಯೇ ಪ್ರಯಾಣಿಸುವ, ಆ ಸಿದ್ಧರು ಪರಸ್ಪರರಲ್ಲಿ ಸಮಾಲೋಚನೆಗೈದು ಪಾಂಡುವಿನ ಪುತ್ರರನ್ನು ಮುಂದಿಟ್ಟುಕೊಂಡು, ಪಾಂಡವರನ್ನು ಭೀಷ್ಮ ಮತ್ತು ಧೃತರಾಷ್ಟ್ರನಿಗೆ ಒಪ್ಪಿಸಲೋಸುಗ ನಾಗಸಾಹ್ವಯ ನಗರಕ್ಕೆ ಹೊರಟರು.

01117006a ತಸ್ಮಿನ್ನೇವ ಕ್ಷಣೇ ಸರ್ವೇ ತಾನಾದಾಯ ಪ್ರತಸ್ಥಿರೇ|

01117006c ಪಾಂಡೋರ್ದಾರಾಂಶ್ಚ ಪುತ್ರಾಂಶ್ಚ ಶರೀರಂ ಚೈವ ತಾಪಸಾಃ||

ಅದೇ ಕ್ಷಣದಲ್ಲಿ ಸರ್ವ ತಾಪಸರೂ ಪಾಂಡುವಿನ ಪತ್ನಿ, ಮಕ್ಕಳು ಮತ್ತು ಶರೀರವನ್ನು ತೆಗೆದುಕೊಂಡು ಹೊರಟರು.

01117007a ಸುಖಿನೀ ಸಾ ಪುರಾ ಭೂತ್ವಾ ಸತತಂ ಪುತ್ರವತ್ಸಲಾ|

01117007c ಪ್ರಪನ್ನಾ ದೀರ್ಘಮಧ್ವಾನಂ ಸಂಕ್ಷಿಪ್ತಂ ತದಮನ್ಯತ||

ಹಿಂದೆ ಸುಖವನ್ನೇ ಕಂಡಿದ್ದ ಕುಂತಿಯು ಸತತವೂ ಪುತ್ರವತ್ಸಳಲಾಗಿದ್ದು ದೀರ್ಘ ಪ್ರಯಾಣವನ್ನು ಸಂಕ್ಷಿಪ್ತವಾದಂತೆ ಕಂಡಳು.

01117008a ಸಾ ನದೀರ್ಘೇಣ ಕಾಲೇನ ಸಂಪ್ರಾಪ್ತಾ ಕುರುಜಾಂಗಲಂ|

01117008c ವರ್ಧಮಾನಪುರದ್ವಾರಮಾಸಸಾದ ಯಶಸ್ವಿನೀ||

ಹೆಚ್ಚು ಸಮಯವನ್ನು ತೆಗೆದುಕೊಳ್ಳದೇ ಆ ಯಶಸ್ವಿನಿಯು ಕುರುಜಂಗಲವನ್ನು ಸೇರಿ ವರ್ಧಮಾನ ಪುರದ್ವಾರವನ್ನು ತಲುಪಿದಳು.

01117009a ತಂ ಚಾರಣಸಹಸ್ರಾಣಾಂ ಮುನೀನಾಮಾಗಮಂ ತದಾ|

01117009c ಶ್ರುತ್ವಾ ನಾಗಪುರೇ ನೄಣಾಂ ವಿಸ್ಮಯಃ ಸಮಜಾಯತ||

ನಾಗಪುರವಾಸಿಗಳು ಸಹಸ್ರಾರು ಚಾರಣ-ಮುನಿಗಳು ಆಗಮಿಸಿದ್ದಾರೆ ಎಂದು ಕೇಳಿ ವಿಸ್ಮಿತರಾದರು.

01117010a ಮುಹೂರ್ತೋದಿತ ಆದಿತ್ಯೇ ಸರ್ವೇ ಧರ್ಮಪುರಸ್ಕೃತಾಃ|

01117010c ಸದಾರಾಸ್ತಾಪಸಾನ್ದ್ರಷ್ಟುಂ ನಿರ್ಯಯುಃ ಪುರವಾಸಿನಃ||

ಸೂರ್ಯೋದಯ ಮುಹೂರ್ತದಲ್ಲಿಯೇ ಎಲ್ಲ ಧರ್ಮ ಪುರಸ್ಕೃತ ಪುರವಾಸಿಗಳು ತಮ್ಮ ಪತ್ನಿಯರನ್ನೊಡಗೂಡಿ ತಾಪಸಿಗಳನ್ನು ನೋಡಲು ಹೊರಬಂದರು.

01117011a ಸ್ತ್ರೀಸಂಘಾಃ ಕ್ಷತ್ರಸಂಘಾಶ್ಚ ಯಾನಸಂಘಾನ್ಸಮಾಸ್ಥಿತಾಃ|

01117011c ಬ್ರಾಹ್ಮಣೈಃ ಸಹ ನಿರ್ಜಗ್ಮುರ್ಬ್ರಾಹ್ಮಣಾನಾಂ ಚ ಯೋಷಿತಃ||

ಸ್ತ್ರೀಯರ ಗುಂಪುಗಳು, ಕ್ಷತ್ರಿಯರ ಗುಂಪುಗಳು, ಬಂಡಿಗಳ ಸಾಲುಗಳು, ಬ್ರಾಹ್ಮಣರು ಮತ್ತು ಬ್ರಾಹ್ಮಣ ಪತ್ನಿಯರು ಎಲ್ಲರೂ ಹೊರಬಂದರು.

01117012a ತಥಾ ವಿಟ್ಶೂದ್ರಸಂಘಾನಾಂ ಮಹಾನ್ವ್ಯತಿಕರೋಽಭವತ್|

01117012c ನ ಕಶ್ಚಿದಕರೋದೀರ್ಷ್ಯಾಮಭವನ್ಧರ್ಮಬುದ್ಧಯಃ||

ಅಲ್ಲಿ ಶೂದ್ರರ ಮತ್ತು ವೈಶ್ಯರ ಬಹುದೊಡ್ಡ ಗುಂಪೇ ಇತ್ತು. ಯಾರಲ್ಲಿಯೂ ಅಸೂಯೆಭಾವನೆಯಿರಲಿಲ್ಲ. ಎಲ್ಲರ ಮನಸ್ಸೂ ಧರ್ಮದಮೇಲೆಯೇ ಇತ್ತು.

01117013a ತಥಾ ಭೀಷ್ಮಃ ಶಾಂತನವಃ ಸೋಮದತ್ತೋಽಥ ಬಾಹ್ಲಿಕಃ|

01117013c ಪ್ರಜ್ಞಾಚಕ್ಷುಶ್ಚ ರಾಜರ್ಷಿಃ ಕ್ಷತ್ತಾ ಚ ವಿದುರಃ ಸ್ವಯಂ||

01117014a ಸಾ ಚ ಸತ್ಯವತೀ ದೇವೀ ಕೌಸಲ್ಯಾ ಚ ಯಶಸ್ವಿನೀ|

01117014c ರಾಜದಾರೈಃ ಪರಿವೃತಾ ಗಾಂಧಾರೀ ಚ ವಿನಿರ್ಯಯೌ||

01117015a ಧೃತರಾಷ್ಟ್ರಸ್ಯ ದಾಯಾದಾ ದುರ್ಯೋಧನಪುರೋಗಮಾಃ|

01117015c ಭೂಷಿತಾ ಭೂಷಣೈಶ್ಚಿತ್ರೈಃ ಶತಸಂಖ್ಯಾ ವಿನಿರ್ಯಯುಃ||

ಭೀಷ್ಮ ಶಾಂತನವ, ಬಾಹ್ಲೀಕ ಸೋಮದತ್ತ, ಪ್ರಜ್ಞಾಚಕ್ಷುಷಿ ರಾಜರ್ಷಿ, ಸ್ವಯಂ ಕ್ಷತ್ತ ವಿದುರ, ದೇವಿ ಸತ್ಯವತೀ, ಯಶಸ್ವಿನೀ ಕೌಸಲ್ಯಾ, ರಾಜಕುಮಾರರಿಂದ ಸುತ್ತುವರೆಯಲ್ಪಟ್ಟ ಗಾಂಧಾರೀ ಇವರೆಲ್ಲರೂ ಹೊರಬಂದರು. ದುರ್ಯೋಧನನ ಮುಂದಾಳುತನದಲ್ಲಿದ್ದ ಧೃತರಾಷ್ಟ್ರನ ಮಕ್ಕಳು, ಸುಂದರ ಭೂಷಣಗಳಿಂದ ಭೂಷಿತರಾಗಿ ನೂರು ಸಂಖ್ಯೆಯಲ್ಲಿ ಹೊರಬಂದರು.

01117016a ತಾನ್ಮಹರ್ಷಿಗಣಾನ್ಸರ್ವಾಂ ಶಿರೋಭಿರಭಿವಾದ್ಯ ಚ|

01117016c ಉಪೋಪವಿವಿಶುಃ ಸರ್ವೇ ಕೌರವ್ಯಾಃ ಸಪುರೋಹಿತಾಃ||

ಆ ಸರ್ವ ಮಹರ್ಷಿಗಣಕ್ಕೆ ಶಿರಬಾಗಿ ನಮಸ್ಕರಿಸಿದ ಸರ್ವ ಕೌರವರೂ ಸಪುರೋಹಿತರಾಗಿ ಅವರಿಗಿಂಥ ಕೆಳಸ್ಥಾನದಲ್ಲಿ ಕುಳಿತುಕೊಂಡರು.

01117017a ತಥೈವ ಶಿರಸಾ ಭೂಮಾವಭಿವಾದ್ಯ ಪ್ರಣಮ್ಯ ಚ|

01117017c ಉಪೋಪವಿವಿಶುಃ ಸರ್ವೇ ಪೌರಜಾನಪದಾ ಅಪಿ||

ಹಾಗೆಯೇ ಭೂಮಿಗೆ ತಲೆಬಾಗಿಸಿ ನಮಸ್ಕರಿಸಿದ ಸರ್ವ ಪೌರಜರನೂ ಕೂಡ ಕುಳಿತುಕೊಂಡರು.

01117018a ತಮಕೂಜಮಿವಾಜ್ಞಾಯ ಜನೌಘಂ ಸರ್ವಶಸ್ತದಾ|

01117018c ಭೀಷ್ಮೋ ರಾಜ್ಯಂ ಚ ರಾಷ್ಟ್ರಂ ಚ ಮಹರ್ಷಿಭ್ಯೋ ನ್ಯವೇದಯತ್||

ಅಲ್ಲಿ ನೆರೆದಿರುವ ಸರ್ವ ಜನಸಂದಣಿಯೂ ಮೌನಗೊಂಡಾಗ, ಭೀಷ್ಮನು ರಾಜ್ಯ ಮತ್ತು ರಾಷ್ಟ್ರವನ್ನು ಆ ಮಹರ್ಷಿಗಳಿಗೆ ಅರ್ಪಿಸಿದನು. 

01117019a ತೇಷಾಮಥೋ ವೃದ್ಧತಮಃ ಪ್ರತ್ಯುತ್ಥಾಯ ಜಟಾಜಿನೀ|

01117019c ಮಹರ್ಷಿಮತಮಾಜ್ಞಾಯ ಮಹರ್ಷಿರಿದಮಬ್ರವೀತ್||

ಆಗ ಅವರಲ್ಲಿಯೇ ಹಿರಿಯವನಾದ, ಇತರ ಮಹರ್ಷಿಗಳ ಮನಸ್ಸನ್ನು ಅರಿತಿದ್ದ, ಜಟಾಜಿನಿಧಾರಿಣಿ ವೃದ್ಧ ಮಹರ್ಷಿಯೊಬ್ಬನು ಎದ್ದು ನಿಂತು ಹೇಳಿದನು:

01117020a ಯಃ ಸ ಕೌರವ್ಯದಾಯಾದಃ ಪಾಂಡುರ್ನಾಮ ನರಾಧಿಪಃ|

01117020c ಕಾಮಭೋಗಾನ್ಪರಿತ್ಯಜ್ಯ ಶತಶೃಂಗಮಿತೋ ಗತಃ||

“ಕೌರವ್ಯದಾಯಾದಿ ಪಾಂಡುವೆನ್ನುವ ನರಾಧಿಪನು ಕಾಮಭೋಗಗಳನ್ನು ಪರಿತ್ಯಜಿಸಿ ಶತಶೃಂಗವನ್ನು ಸೇರಿದನು.

01117021a ಬ್ರಹ್ಮಚರ್ಯವ್ರತಸ್ಥಸ್ಯ ತಸ್ಯ ದಿವ್ಯೇನ ಹೇತುನಾ|

01117021c ಸಾಕ್ಷಾದ್ಧರ್ಮಾದಯಂ ಪುತ್ರಸ್ತಸ್ಯ ಜಾತೋ ಯುದಿಷ್ಠಿರಃ||

ಆ ಬ್ರಹ್ಮಚರ್ಯವ್ರತಸ್ಥನಿಗೆ ದಿವ್ಯ ಕಾರಣ ಸಾಕ್ಷಾತ್ ದರ್ಮನಿಂದ ಈ ಪುತ್ರ ಯುಧಿಷ್ಠಿರನು ಜನಿಸಿದನು.

01117022a ತಥೇಮಂ ಬಲಿನಾಂ ಶ್ರೇಷ್ಠಂ ತಸ್ಯ ರಾಜ್ಞೋ ಮಹಾತ್ಮನಃ|

01117022c ಮಾತರಿಶ್ವಾ ದದೌ ಪುತ್ರಂ ಭೀಮಂ ನಾಮ ಮಹಾಬಲಂ||

ಇದೇ ರೀತಿ ಆ ಶ್ರೇಷ್ಠ ಮಹಾತ್ಮ ರಾಜನಿಗೆ ವಾಯುದೇವನು ಭೀಮ ಎಂಬ ಹೆಸರಿನ ಮಹಾಬಲಶಾಲಿ ಪುತ್ರನನ್ನು ಕೊಟ್ಟನು.

01117023a ಪುರುಹೂತಾದಯಂ ಜಜ್ಞೇ ಕುಂತ್ಯಾಂ ಸತ್ಯಪರಾಕ್ರಮಃ|

01117023c ಯಸ್ಯ ಕೀರಿಟಿಃ ಮಹೇಷ್ವಾಸಾನ್ಸರ್ವಾನಭಿಭವಿಷ್ಯತಿ||

ಪುರುಹೂತನಿಂದ ಕುಂತಿಯಲ್ಲಿ ಸತ್ಯಪರಾಕ್ರಮಿ, ಮಹೇಷ್ವಾಸರಲ್ಲಿ ಶ್ರೇಷ್ಠನೆನಿಸಿಕೊಳ್ಳುವ ಈ ಕಿರೀಟಿಯು ಜನಿಸಿದನು.

01117024a ಯೌ ತು ಮಾದ್ರೀ ಮಹೇಷ್ವಾಸಾವಸೂತ ಕುರುಸತ್ತಮೌ|

01117024c ಅಶ್ವಿಭ್ಯಾಂ ಮನುಜವ್ಯಾಘ್ರಾವಿಮೌ ತಾವಪಿ ತಿಷ್ಠತಃ||

ಅಶ್ವಿನಿಯರಿಂದ ಮಾದ್ರಿಯಲ್ಲಿ ಜನಿಸಿದ ಮಹೇಷ್ವಾಸ ಕುರುಸತ್ತಮ ಅವಳಿ ಪುತ್ರರೂ ಇಲ್ಲಿ ನಿಂತಿದ್ದಾರೆ.

01117025a ಚರತಾ ಧರ್ಮನಿತ್ಯೇನ ವನವಾಸಂ ಯಶಸ್ವಿನಾ|

01117025c ಏಷ ಪೈತಾಮಹೋ ವಂಶಃ ಪಾಂಡುನಾ ಪುನರುದ್ಧೃತಃ||

ನಿತ್ಯವೂ ಧರ್ಮಚರಿತನಾಗಿದ್ದ ಆ ವನವಾಸಿ ಯಶಸ್ವಿ ಪಾಂಡುವಿನಿಂದ ಅವನ ಪಿತಾಮಹನ ವಂಶವು ಪುನರುತ್ಥಾನವಾಗಿದೆ. 

01117026a ಪುತ್ರಾಣಾಂ ಜನ್ಮ ವೃದ್ಧಿಂ ಚ ವೈದಿಕಾಧ್ಯಯನಾನಿ ಚ|

01117026c ಪಶ್ಯತಃ ಸತತಂ ಪಾಂಡೋಃ ಶಶ್ವತ್ಪ್ರೀತಿರವರ್ಧತ||

ಪುತ್ರರ ಜನನ, ವೃದ್ಧಿ, ವೈದಿಕ, ಅದ್ಯಯನ ಇವುಗಳನ್ನೆಲ್ಲ ನೋಡಿದ ಪಾಂಡುವು ಸತತವಾಗಿಯೂ ಸಂತೋಷದಿಂದಿರುತ್ತಿದ್ದನು.

01117027a ವರ್ತಮಾನಃ ಸತಾಂ ವೃತ್ತೇ ಪುತ್ರಲಾಭಮವಾಪ್ಯ ಚ|

01117027c ಪಿತೃಲೋಕಂ ಗತಃ ಪಾಂಡುರಿತಃ ಸಪ್ತದಶೇಽಹನಿ||

ಸತ್ಯ ನಡವಳಿಕೆಯಲ್ಲಿಯೇ ನಿರತನಾಗಿದ್ದು ಪುತ್ರಲಾಭವನ್ನು ಪಡೆದ ಆ ಪಾಂಡುವು ಹದಿನೇಳು ದಿವಸಗಳ ಹಿಂದೆ ಪಿತೃಲೋಕವನ್ನು ಸೇರಿದನು.

01117028a ತಂ ಚಿತಾಗತಮಾಜ್ಞಾಯ ವೈಶ್ವಾನರಮುಖೇ ಹುತಂ|

01117028c ಪ್ರವಿಷ್ಟಾ ಪಾವಕಂ ಮಾದ್ರೀ ಹಿತ್ವಾ ಜೀವಿತಮಾತ್ಮನಃ||

ವೈಶ್ವಾನರಮುಖದಲ್ಲಿ ಹುತನಾಗುತ್ತಿದ್ದ ಅವನನ್ನು ನೋಡಿದ ಮಾದ್ರಿಯು ತನ್ನ ಜೀವನವನ್ನೂ ತ್ಯಜಿಸಿ ಪಾವಕವನ್ನು ಪ್ರವೇಶಿಸಿದಳು.

01117029a ಸಾ ಗತಾ ಸಹ ತೇನೈವ ಪತಿಲೋಕಮನುವ್ರತಾ||

01117029c ತಸ್ಯಾಸ್ತಸ್ಯ ಚ ಯತ್ಕಾರ್ಯಂ ಕ್ರಿಯತಾಂ ತದನಂತರಂ||

01117030a ಇಮೇ ತಯೋಃ ಶರೀರೇ ದ್ವೇ ಸುತಾಶ್ಚೇಮೇ ತಯೋರ್ವರಾಃ|

01117030c ಕ್ರಿಯಾಭಿರನುಗೃಹ್ಯಂತಾಂ ಸಹ ಮಾತ್ರಾ ಪರಂತಪಾಃ||

ಅವನ ಹಿಂದೆಯೇ ಅವಳು ತನ್ನ ಪತಿಲೋಕವನ್ನು ಅನುಸರಿಸಿದಳು. ಅವನ ಮತ್ತು ಅವಳ ಅಂತ್ಯಕಾರ್ಯವನ್ನು ನೆರವೇರಿಸಿ. ಇದೋ ಅವರೀರ್ವರ ಶರೀರ ಮತ್ತು ಅವರ ಶ್ರೇಷ್ಠ ಮಕ್ಕಳು. ಈ ಪರಂತಪರನ್ನು ಮತ್ತು ಅವರ ತಾಯಿಯನ್ನು ಸ್ವೀಕರಿಸಿ.

01117031a ಪ್ರೇತಕಾರ್ಯೇ ಚ ನಿರ್ವೃತ್ತೇ ಪಿತೃಮೇಧಂ ಮಹಾಯಶಾಃ|

01117031c ಲಭತಾಂ ಸರ್ವಧರ್ಮಜ್ಞಃ ಪಾಂಡುಃ ಕುರುಕುಲೋದ್ವಹಃ||

ಸರ್ವಧರ್ಮಜ್ಞ ಕುರುಕುಲೋದ್ವಹ ಪಾಂಡುವಿಗೆ ಪ್ರೇತಕಾರ್ಯದ ನಂತರ ಮಹಾಯಶಸ್ಸನ್ನು ನೀಡುವ ಪಿತೃಮೇಧವೂ ದೊರೆಯಲಿ.”

01117032a ಏವಮುಕ್ತ್ವಾ ಕುರೂನ್ಸರ್ವಾನ್ಕುರೂಣಾಮೇವ ಪಶ್ಯತಾಂ|

01117032c ಕ್ಷಣೇನಾಂತರ್ಹಿತಾಃ ಸರ್ವೇ ಚಾರಣಾ ಗುಹ್ಯಕೈಃ ಸಹ||

ಈ ರೀತಿ ಅಲ್ಲಿ ಸೇರಿರುವ ಕುರುಗಳೆಲ್ಲರಿಗೂ ಹೇಳಿ ಕುರುಗಳು ನೋಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಸರ್ವ ಚಾರಣ-ಗುಹ್ಯಕರೂ ಒಟ್ಟಿಗೇ ಅಂತರ್ಧಾನರಾದರು.

01117033a ಗಂಧರ್ವನಗರಾಕಾರಂ ತತ್ರೈವಾಂತರ್ಹಿತಂ ಪುನಃ|

01117033c ಋಷಿಸಿದ್ಧಗಣಂ ದೃಷ್ಟ್ವಾ ವಿಸ್ಮಯಂ ತೇ ಪರಂ ಯಯುಃ||

ಗಂಧರ್ವನಗರದಂತೆ ಅಲ್ಲಿಯೇ ಅಂತರ್ಧಾನರಾದ ಆ ಋಷಿಸಿದ್ಧಗಣಗಳನ್ನು ನೋಡಿದ ಪುರಜನರು ಪುನಃ ಪರಮ ವಿಸ್ಮಿತರಾದರು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಋಷಿಸಂವಾದೇ ಸಪ್ತದಶಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಋಷಿಸಂವಾದ ಎನ್ನುವ ನೂರಾಹದಿನೇಳನೆಯ ಅಧ್ಯಾಯವು.

Comments are closed.