Adi Parva: Chapter 108

ಆದಿ ಪರ್ವ: ಸಂಭವ ಪರ್ವ

೧೦೮

ದುರ್ಯೋಧನಾದಿ ಧೃತರಾಷ್ಟ್ರನ ನೂರಾ‌ಒಂದು ಮಕ್ಕಳ ಹೆಸರುಗಳು (೧-೧೪). ಧೃತರಾಷ್ಟ್ರನು ಮಕ್ಕಳಿಗೆ ವಿವಾಹಮಾಡಿಸಿದ್ದುದು, ಮಗಳು ದುಃಶಲೆಯನ್ನು ಸಿಂಧುರಾಜ ಜಯದ್ರಥನಿಗೆ ವಿವಾಹದಲ್ಲಿ ಕೊಟ್ಟಿದ್ದುದು (೧೫-೧೮).

01108001 ಜನಮೇಜಯ ಉವಾಚ|

01108001a ಜ್ಯೇಷ್ಟಾನುಜ್ಯೇಷ್ಟತಾಂ ತೇಷಾಂ ನಾಮಧೇಯಾನಿ ಚಾಭಿಭೋ|

01108001c ಧೃತರಾಷ್ಟ್ರಸ್ಯ ಪುತ್ರಾಣಾಮಾನುಪೂರ್ವ್ಯೇಣ ಕೀರ್ತಯ||

ಜನಮೇಜಯನು ಹೇಳಿದನು: “ವಿಭೋ! ಹಿರಿಯವನಿಂದ ಕಿರಿಯವನವರೆಗೆ ಅನುಕ್ರಮವಾಗಿ ಧೃತರಾಷ್ಟ್ರನ ಪುತ್ರರ ಹೆಸರುಗಳನ್ನು ಹೇಳು.”

01108002 ವೈಶಂಪಾಯನ ಉವಾಚ|

01108002a ದುರ್ಯೋಧನೋ ಯುಯುತ್ಸುಶ್ಚ ರಾಜನ್ದುಃಶಾಸನಸ್ತಥಾ|

01108002c ದುಃಸಹೋ ದುಃಶಲಶ್ಚೈವ ಜಲಸಂಧಃ ಸಮಃ ಸಹಃ||

01108003a ವಿಂದಾನುವಿಂದೌ ದುರ್ಧರ್ಷಃ ಸುಬಾಹುರ್ದುಷ್ಪ್ರಧರ್ಷಣಃ|

01108003c ದುರ್ಮರ್ಷಣೋ ದುರ್ಮುಖಶ್ಚ ದುಷ್ಕರ್ಣಃ ಕರ್ಣ ಏವ ಚ||

01108004a ವಿವಿಂಶತಿರ್ವಿಕರ್ಣಶ್ಚ ಜಲಸಂಧಃ ಸುಲೋಚನಃ|

01108004c ಚಿತ್ರೋಪಚಿತ್ರೌ ಚಿತ್ರಾಕ್ಷಶ್ಚಾರುಚಿತ್ರಃ ಶರಾಸನಃ||

01108005a ದುರ್ಮದೋ ದುಷ್ಪ್ರಗಾಹಶ್ಚ ವಿವಿತ್ಸುರ್ವಿಕಟಃ ಸಮಃ|

01108005c ಊರ್ಣನಾಭಃ ಸುನಾಭಶ್ಚ ತಥಾ ನಂದೋಪನಂದಕೌ||

01108006a ಸೇನಾಪತಿಃ ಸುಷೇಣಶ್ಚ ಕುಂಡೋದರಮಹೋದರೌ|

01108006c ಚಿತ್ರಬಾಣಶ್ಚಿತ್ರವರ್ಮಾ ಸುವರ್ಮಾ ದುರ್ವಿಮೋಚನಃ||

01108007a ಅಯೋಬಾಹುರ್ಮಹಾಬಾಹುಶ್ಚಿತ್ರಾಂಗಶ್ಚಿತ್ರಕುಂಡಲಃ|

01108007c ಭೀಮವೇಗೋ ಭೀಮಬಲೋ ಬಲಾಕೀ ಬಲವರ್ಧನಃ||

01108008a ಉಗ್ರಾಯುಧೋ ಭೀಮಕರ್ಮಾ ಕನಕಾಯುರ್ದೃದಾಯುಧಃ|

01108008c ದೃದವರ್ಮಾ ದೃದಕ್ಷತ್ರಃ ಸೋಮಕೀರ್ತಿರನೂದರಃ||

01108009a ದೃದಸಂಧೋ ಜರಾಸಂಧಃ ಸತ್ಯಸಂಧಃ ಸದಃಸುವಾಕ್|

01108009c ಉಗ್ರಶ್ರವಾ ಅಶ್ವಸೇನಃ ಸೇನಾನೀರ್ದುಷ್ಪರಾಜಯಃ||

01108010a ಅಪರಾಜಿತಃ ಪಂಡಿತಕೋ ವಿಶಾಲಾಕ್ಷೋ ದುರಾವರಃ|

01108010c ದೃದಹಸ್ತಃ ಸುಹಸ್ತಶ್ಚ ವಾತವೇಗಸುವರ್ಚಸೌ||

01108011a ಆದಿತ್ಯಕೇತುರ್ಬಹ್ವಾಶೀ ನಾಗದಂತೋಗ್ರಯಾಯಿನೌ|

01108011c ಕವಚೀ ನಿಷಂಗೀ ಪಾಶೀ ಚ ದಂಡಧಾರೋ ಧನುರ್ಗ್ರಹಃ||

01108012a ಉಗ್ರೋ ಭೀಮರಥೋ ವೀರೋ ವೀರಬಾಹುರಲೋಲುಪಃ|

01108012c ಅಭಯೋ ರೌದ್ರಕರ್ಮಾ ಚ ತಥಾ ದೃದರಥಸ್ತ್ರಯಃ||

01108013a ಅನಾಧೃಷ್ಯಃ ಕುಂಡಭೇದೀ ವಿರಾವೀ ದೀರ್ಘಲೋಚನಃ|

01108013c ದೀರ್ಘಬಾಹುರ್ಮಹಾಬಾಹುರ್ವ್ಯೂದೋರುಃ ಕನಕಧ್ವಜಃ||

01108014a ಕುಂಡಾಶೀ ವಿರಜಾಶ್ಚೈವ ದುಃಶಲಾ ಚ ಶತಾಧಿಕಾ|

01108014c ಏತದೇಕಶತಂ ರಾಜನ್ಕನ್ಯಾ ಚೈಕಾ ಪ್ರಕೀರ್ತಿತಾ||

ವೈಶಂಪಾಯನನು ಹೇಳಿದನು: “೧. ದುರ್ಯೋಧನ ೨. ಯುಯುತ್ಸು ೩. ದುಃಶಾಸನ ೪. ದುಃಶಲ ೫. ಜಲಸಂಧ ೬. ಸಮ ೭. ಸಹ ೮. ವಿಂದ ೯. ಅನುವಿಂದ ೧೦. ದುರ್ಧರ್ಶ ೧೧. ಸುಬಾಹು ೧೨. ದುಷ್ಪ್ರದರ್ಶನ ೧೩. ದುರ್ಮರ್ಶನ ೧೪. ದುರ್ಮುಖ ೧೫. ದುಷ್ಕರ್ಮ ೧೬. ಕರ್ಣ ೧೭. ವಿವಿಂಶತಿ ೧೮. ವಿಕರ್ಣ ೧೯. ಸುಲೋಚನ ೨೦. ಚಿತ್ರ ೨೧. ಉಪಚಿತ್ರ ೨೨. ಚಿತ್ರಾಕ್ಷ ೨೩. ಚಾರುಚಿತ್ರ ೨೪. ಶರಾಸನ ೨೫. ದುರ್ಮದ ೨೬. ದುಷ್ಪ್ರಗಹ ೨೭. ವಿವಿತ್ಸು ೨೮. ವಿಕಟ ೨೯. ಊರ್ಣನಾಭ ೩೦. ಸುನಭ ೩೧. ನಂದ ೩೨. ಉಪನಂದಕ ೩೩. ಸೇನಾಪತಿ ೩೪. ಸುಷೇಣ ೩೫. ಕುಂಡೋದರ ೩೬. ಮಹೋದರ ೩೭. ಚಿತ್ರಬಾಣ ೩೮. ಚಿತ್ರವರ್ಮ ೩೯. ಸುವರ್ಮ ೪೦. ದುರ್ವಿಮೋಚನ ೪೧. ಅಯೋಬಾಹು ೪೨. ಮಹಾಬಾಹು ೪೩. ಚಿತ್ರಾಂಗ ೪೪. ಚಿತ್ರಕುಂಡಲ ೪೫. ಭೀಮವೇಗ ೪೬. ಭೀಮಬಲ ೪೭. ಬಲಕಿ ೪೮. ಬಲವರ್ಧನ ೪೯. ಉಗ್ರಾಯುಧ ೫೦. ಭೀಮಕರ್ಮ ೫೧. ಕನಕಾಯು ೫೨. ದೃಢಾಯುಧ ೫೩. ದೃಢವರ್ಮ ೫೪. ದೃಢಕ್ಷತ್ರ ೫೫. ಸೋಮಕೀರ್ತಿ ೫೬. ಅನುದಾರ ೫೭. ದೃಢಸಂಧ ೫೮. ಜರಾಸಂಧ ೫೯. ಸತ್ಯಸಂಧ ೬೦. ಸದಾಃಸುವಕ್ ೬೧. ಉಗ್ರಶ್ರವ ೬೨. ಅಶ್ವಸೇನ ೬೩. ಸೇನಾನಿ ೬೪. ದುಃಷ್ಪರಾಜಯ ೬೫. ಅಪರಾಜಿತ ೬೬. ಪಂದೀತಕ ೬೭. ವಿಶಾಲಾಕ್ಷ ೬೮. ದುರಾವರ ೬೯. ದೃಢಹಸ್ತ ೭೦. ಸುಹಸ್ತ ೭೧. ವಾತವೇಗ ೭೨. ಸುವರ್ಚಸ ೭೩. ಆದಿತ್ಯಕೇತು ೭೪. ಬಹ್ವಾಸಿ ೭೫. ನಾಗದಂತ ೭೬. ಉಗ್ರಯಾಯಿ ೭೭. ಕವಚಿ ೭೮. ನಿಶಾಂಗಿ ೭೯. ಪಾಸಿ ೮೦. ದಂಡಾಧರ ೮೧. ಧನುಗ್ರಹ ೮೨. ಉಗ್ರ ೮೩. ಭೀಮರಥ ೮೪. ವೀರ ೮೫. ವೀರಬಾಹು ೮೬. ಅಲುಲೋಪ ೮೭. ಅಭಯ ೮೮. ರುದ್ರಕರ್ಮ ೮೯. ದೃಢರಥ ೯೦. ಅನಾದೃಷ್ಯ ೯೧. ಕುಂಡಬೇಧಿ ೯೨. ವೀರಾವಿ ೯೩. ದೀರ್ಘಲೋಚನ ೯೪. ದೀರ್ಘಬಾಹು ೯೫. ಮಹಾಬಾಹು ೯೬. ವ್ಯುಧೋರು ೯೭. ಕನಕಧ್ವಜ ೯೮. ಕುಂಡಸಿ ೯೯. ವಿರಾಜ ೧೦೦. ದುಃಶಲಾ.

01108015a ನಾಮಧೇಯಾನುಪೂರ್ವ್ಯೇಣ ವಿದ್ಧಿ ಜನ್ಮಕ್ರಮಂ ನೃಪ|

01108015c ಸರ್ವೇ ತ್ವತಿರಥಾಃ ಶೂರಾಃ ಸರ್ವೇ ಯುದ್ಧವಿಶಾರದಾಃ||

ರಾಜನ್! ಇವೇ ಜನ್ಮಕ್ರಮದಂತೆ ಒಬ್ಬೊಬ್ಬ ಆ ಎಲ್ಲ ಅತಿರಥ ಶೂರ ಯುದ್ಧವಿಶಾರದರ ಹೆಸರುಗಳೆಂದು ತಿಳಿ.

01108016a ಸರ್ವೇ ವೇದವಿದಶ್ಚೈವ ರಾಜಶಾಸ್ತ್ರೇಷು ಕೋವಿದಾಃ|

01108016c ಸರ್ವೇ ಸಂಸರ್ಗವಿದ್ಯಾಸು ವಿದ್ಯಾಭಿಜನಶೋಭಿನಃ||

ಅವರೆಲ್ಲರೂ ಎಲ್ಲ ಸಂಸರ್ಗ ಮತ್ತು ಜನಶೋಭಿನ ವಿದ್ಯೆಗಳಲ್ಲಿ ಪರಿಣಿತರಿದ್ದು ವೇದವಿದರೂ ರಾಜಶಾಸ್ತ್ರಗಳಲ್ಲಿ ಕೋವಿದರೂ ಆಗಿದ್ದರು.

01108017a ಸರ್ವೇಷಾಮನುರೂಪಾಶ್ಚ ಕೃತಾ ದಾರಾ ಮಹೀಪತೇ|

01108017c ಧೃತರಾಷ್ಟ್ರೇಣ ಸಮಯೇ ಸಮೀಕ್ಷ್ಯ ವಿಧಿವತ್ತದಾ||

ಮಹೀಪತೇ! ಧೃತರಾಷ್ಟ್ರನು ಅವರೆಲ್ಲರಿಗೂ ಸರಿ ಸಮಯಗಳಲ್ಲಿ ಅನುರೂಪ ಪತ್ನಿಯರನ್ನು ಹುಡುಕಿ ವಿಧಿವತ್ತಾಗಿ ವಿವಾಹಗಳನ್ನು ನೆರವೇರಿಸಿದನು.

01108018a ದುಃಶಲಾಂ ಸಮಯೇ ರಾಜಾ ಸಿಂಧುರಾಜಾಯ ಭಾರತ|

01108018c ಜಯದ್ರಥಾಯ ಪ್ರದದೌ ಸೌಬಲಾನುಮತೇ ತದಾ||

ಭಾರತ! ಸರಿ ಸಮಯದಲ್ಲಿ ರಾಜನು ಸೌಬಲೆಯ ಅನುಮತಿಯಂತೆ ದುಃಶಲೆಯನ್ನು ಸಿಂಧುರಾಜ ಜಯದ್ರಥನಿಗೆ ವಿವಾಹ ಮಾಡಿ ಕೊಟ್ಟನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಧೃತರಾಷ್ಟ್ರಪುತ್ರನಾಮಕಥನೇ ನವಾಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಧೃತರಾಷ್ಟ್ರಪುತ್ರನಾಮಕಥನ ಎನ್ನುವ ನೂರಾಎಂಟನೆಯ ಅಧ್ಯಾಯವು.

Comments are closed.