ವಿಶ್ವಾಮಿತ್ರ

Related imageಭೂಮಿಯ ಮೇಲೆ ಗಾಧಿ ಎಂಬ ಹೆಸರಿನ ಪ್ರಸಿದ್ಧ ಕ್ಷತ್ರಿಯನಿದ್ದನು. ಅವನ ಪುತ್ರನೇ ಪ್ರತಾಪವಾನ್ ವಿಶ್ವಾಮಿತ್ರನಾಗಿದ್ದನು. ಮಹಾತಪಸ್ವಿಯೂ ಮಹಾಯೋಗಿಯೂ ಆಗಿದ್ದ ಆ ಕೌಶಿಕ ರಾಜನು ಮಗ ವಿಶ್ವಾಮಿತ್ರನನ್ನು ಅಭಿಷೇಕಿಸಿದನು. ದೇಹನ್ಯಾಸದ ಮನಸ್ಸು ಮಾಡಿದ್ದ ಅವನಿಗೆ ಪ್ರೀತಿಯಿಂದ ಪ್ರಜೆಗಳು ಹೇಳಿದರು: “ಮಹಾಪ್ರಾಜ್ಞ! ಹೋಗಬೇಡ! ಮಹಾಭಯದಿಂದ ನಮ್ಮನ್ನು ಕಾಪಾಡು!” ಅದಕ್ಕೆ ಪ್ರತಿಯಾಗಿ ಗಾಧಿಯು ಪ್ರಜೆಗಳಿಗೆ ಹೇಳಿದನು: “ನನ್ನ ಮಗನು ವಿಶ್ವದ ರಕ್ಷಕನಾಗುತ್ತಾನೆ!” ಹೀಗೆ ಹೇಳಿ ಗಾಧಿಯು ವಿಶ್ವಾಮಿತ್ರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ತ್ರಿದಿವಕ್ಕೆ ಹೊರಟುಹೋದನು. ಆಗ ವಿಶ್ವಾಮಿತ್ರನು ರಾಜನಾದನು. ಆದರೆ ಪ್ರಯತ್ನಪಟ್ಟರೂ ಅವನಿಗೆ ಪೃಥ್ವಿಯನ್ನು ರಕ್ಷಿಸಲು ಆಗಲಿಲ್ಲ. ಒಮ್ಮೆ ಆ ರಾಜನು ರಾಕ್ಷಸರ ಮಹಾಭಯದ ಕುರಿತು ಕೇಳಿ, ಚತುರಂಗಬಲಾನ್ವಿತನಾಗಿ ನಗರದಿಂದ ಹೊರಟನು. ಬಹಳ ದೂರ ಗಮಿಸಿ ಅವನು ವಸಿಷ್ಠನ ಆಶ್ರಮದ ಬಳಿ ಹೋದನು. ಅಲ್ಲಿ ಅವನ ಸೈನಿಕರು ಅನೀತಿಯಿಂದ ಅನೇಕ ಅಪಚಾರಗಳನ್ನೆಸಗಿದರು. ಭಗವಾನ್ ವಿಪ್ರ ವಸಿಷ್ಠನು ಆಶ್ರಮಕ್ಕೆ ಹಿಂದಿರುಗಲು ಅಲ್ಲಿ ಮಹಾವನವೆಲ್ಲವೂ ಧ್ವಂಸವಾದುದನ್ನು ನೋಡಿದನು. ಅದರಿಂದ ಕ್ರುದ್ಧನಾದ ಮುನಿಸತ್ತಮ ವಸಿಷ್ಠನು “ಘೋರ ಶಬರರನ್ನು ಸೃಷ್ಟಿಸು!” ಎಂದು ತನ್ನ ಗೋವಿಗೆ ಹೇಳಿದನು. ಹಾಗೆ ಹೇಳಲು ಆ ಹಸುವು ಘೋರರಾಗಿ ಕಾಣುತ್ತಿದ್ದ ಪುರುಷರನ್ನು ಸೃಷ್ಟಿಸಿದಳು. ಅವರು ವಿಶ್ವಾಮಿತ್ರನ ಸೇನೆಯನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ನಾಶಪಡಿಸಿದರು. ಪಲಾಯನಮಾಡುತ್ತಿದ್ದ ತನ್ನ ಸೇನೆಯನ್ನು ನೋಡಿ ಗಾಧಿಯ ಮಗ ವಿಶ್ವಾಮಿತ್ರನು ತಪೋಬಲವೇ ಹೆಚ್ಚಿನದೆಂದು ತಿಳಿದು ತಪಸ್ಸನ್ನಾಚರಿಸಲು ಮನಸ್ಸುಮಾಡಿದನು. ಅವನು ಸರಸ್ವತಿಯ ಆ ಶ್ರೇಷ್ಠ ತೀರ್ಥಕ್ಕೆ ಹೋಗಿ ಅಲ್ಲಿ ಉಪವಾಸ ನಿಯಮಗಳಿಂದ ತನ್ನ ದೇಹವನ್ನು ಕೃಶಗೊಳಿಸಿದನು. ಜಲಾಹಾರಿಯಾಗಿ, ವಾಯುಭಕ್ಷಕನಾಗಿ, ಪರ್ಣಾಹಾರಿಯಾಗಿದ್ದನು. ಹಾಗೆಯೇ ನೆಲದ ಮೇಲೆಯೇ ಮಲಗುವುದು ಮುಂತಾದ ಅನ್ಯ ಅನೇಕ ನಿಯಮಗಳನ್ನೂ ಆಚರಿಸಿದನು.

ದೇವತೆಗಳಾದರೋ ಅವನ ವ್ರತವಿಘ್ನವನ್ನುಂಟು ಮಾಡಲು ಬಹಳವಾಗಿ ಪ್ರಯತ್ನಿಸಿದರು. ಆದರೂ ಆ ಮಹಾತ್ಮನ ಬುದ್ಧಿಯು ನಿಯಮಗಳಿಂದ ವಿಚಲಿತಗೊಳ್ಳಲಿಲ್ಲ. ಆಗ ಪರಮ ಪ್ರಯತ್ನದಿಂದ ಬಹುವಿಧದ ತಪಸ್ಸನ್ನು ತಪಿಸಿ ಗಾಧಿಜನು ತೇಜಸ್ಸಿನಲ್ಲಿ ಭಾಸ್ಕರಾಕಾರನಾಗಿ ಬೆಳೆದನು. ಹಾಗೆ ತಪಸ್ಸಿನಲ್ಲಿ ಯುಕ್ತನಾಗಿರುವ ವಿಶ್ವಾಮಿತ್ರನಿಗೆ ಮಹಾತೇಜಸ್ವಿ ವರದ ಪಿತಾಮಹನು ವರವನ್ನೀಯಲು ನಿಶ್ಚಯಿಸಿದನು. “ನಾನು ಬ್ರಾಹ್ಮಣನಾಗಬೇಕು!” ಎಂದು ಅವನು ವರವನ್ನು ಕೇಳಿಕೊಳ್ಳಲು ಸರ್ವಲೋಕಪಿತಾಮಹ ಬ್ರಹ್ಮನು “ಹಾಗೆಯೇ ಆಗಲಿ!” ಎಂದನು. ಉಗ್ರತಪಸ್ಸಿನಿಂದ ಬಾಹ್ಮಣತ್ವವನ್ನು ಪಡೆದು ಆ ಮಹಾಯಶಸ್ವಿಯು ಸುರರಂತೆ ಆಸೆಯನ್ನೀಡೇರಿಸಿಕೊಂಡು ಇಡೀ ಪೃಥ್ವಿಯಲ್ಲಿ ಸಂಚರಿಸಿದನು.

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *